ಕಠ್ಮಂಡು: ಕಳೆದ ಮಧ್ಯರಾತ್ರಿ ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿ 154ಕ್ಕೂ ಹೆಚ್ಚು ಜನ ಮೃತಪಟ್ಟು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಾತ್ರಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪನದಲ್ಲಿ 6.4 ತೀವ್ರತೆಯಿಂದ ಕೂಡಿದ್ದು, ಭೂಕಂಪದ ಕೇಂದ್ರ ಬಿಂದು ಲಾಮಿಡಾಂಡಾದಲ್ಲಿದೆ ಎಂದು ವರದಿಯಾಗಿದೆ.
ಈವರೆಗೂ ಇದರಲ್ಲಿ 154 ಜನ ಮೃತಪಟ್ಟು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಈ ಭೂಕಂಪದ ಮೂಲಕ ಹಿಮಾಲಯದ ಈ ಪ್ರಾಂತ್ಯದಲ್ಲಿ ಭೂಮಿ ಕಂಪಿಸುವುದು ಸಾಮಾನ್ಯ ಎಂಬಂತಾಗಿದೆ.ರಿಕ್ಟರ್ ಮಾಪನದಲ್ಲಿ ಗರಿಷ್ಠ 8.2ರವರೆಗೂ ಇಲ್ಲಿ ಭೂಮಿ ಕಂಪಿಸಿದ ಉದಾಹರಣೆಗಳಿವೆ. 2015ರಲ್ಲಿ ಸಂಭವಿಸಿದ್ದ 7.8 ತೀವ್ರತೆಯ ಭೂಕಂಪಕ್ಕೆ ಸುಮಾರು 9 ಸಾವಿರ ಜನ ಮೃತಪಟ್ಟಿದ್ದರು. ಲಕ್ಷಕ್ಕೂ ಅಧಿಕ ಜನರ ಮನೆಗಳು ಹಾನಿಗೀಡಾಗಿದ್ದು ಇತ್ತೀಚಿನ ಉದಾಹರಣೆ.
ಮೋದಿ ಸಂತಾಪ
ನವದೆಹಲಿ: ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿ ಮೃತಪಟ್ಟವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಅವರು, ಸಂಕಷ್ಟದಲ್ಲಿರುವ ನೇಫಾಳದ ಜತೆ ತಾವು ಇದ್ದೇವೆ ಎಂದು ಹೇಳಿರುವ ಪ್ರಧಾನಿ ಅವರು ನೇಪಾಳಕ್ಕೆ ಅಗತ್ಯವಿರುವ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ.
ಭೂಗರ್ಭದ ಟೆಕ್ಟೋನಿಕ್ ಪ್ಲೇಟ್ಗಳು ಸಂಧಿಸುವ ಸ್ಥಳದಲ್ಲೇ ನೇಪಾಳ ಇರುವುದರಿಂದ ಇಲ್ಲಿ ಆಗಾಗ ಭೂಕಂಪ ಸಂಭವಿಸುವುದು ಸಹಜ. ಇದರೊಂದಿಗೆ ಈ ಪ್ರದೇಶದ ಭೌಗೋಳಿಕ ರಚನೆಯೂ ಆಗಾಗ ಇಲ್ಲಿ ಭೂಕಂಪನ ಸಂಭವಿಸಲು ಕಾರಣವಾಗಿದೆ ಎಂದು ಲಖನೌ ವಿಶ್ವವಿದ್ಯಾಲಯದ ಭೂಗೋಳ ವಿಭಾಗದ ಪ್ರಾಧ್ಯಾಪಕ ಧೃವ್ ಸೆನ್ ಸಿಂಗ್ ವಿವರಿಸಿದ್ದಾರೆ.
ನೇಪಾಳ ಪ್ರಧಾನಿ ಪುಷ್ಪಕಮಲ್ ದಹಾಲ್ ಅವರು ಭೂಕಂಪ ಸಂಭವಿಸಿದ ಜಾಜ್ಕೋಟ್ ಜಿಲ್ಲೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನೇಪಾಳದಲ್ಲಿ ಭೂಕಂಪವಾಗುತ್ತಿದ್ದಂತೆ ದೆಹಲಿ ಮತ್ತು ಉತ್ತರಪ್ರದೇಶದ ಕೆಲ ಭಾಗದಲ್ಲೂ ಸಹ ಭೂಮಿ ನಡುಗಿದ ಅನುಭವವಾಗಿದೆ ಎಂದು ಹೇಳಲಾಗಿದೆ.