ಬೆಂಗಳೂರು: ಈಜು ತರಬೇತಿಯ ಬಳಿಕ ಸ್ನಾನ ಮಾಡುತ್ತಿದ್ದ ಮಹಿಳಾ ಟೆಕ್ಕಿಯ ಫೋಟೋ ಮತ್ತು ವೀಡಿಯೊ ಮಾಡುತ್ತಿದ್ದ ಫಿಟ್ನೆಸ್ ಸೆಂಟರ್ನ ತರಬೇತುದಾರನೊಬ್ಬ ಬಾಣಸವಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬಾಣಸವಾಡಿ ಪ್ರದೇಶದ ಎನ್ಆರ್ಐ ಲೇಔಟ್ ಬಳಿಯ ಫಿಟ್ ನೆಸ್ ಸೆಂಟರ್ ನಲ್ಲಿ ಸ್ನಾನದ ಫೋಟೋ ವಿಡಿಯೋ ಮಾಡಿದ 29 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ ದೂರು ಆಧರಿಸಿ ಕೋಚ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.ಕಳೆದ ನ.5ರಂದು ರಾಮಮೂರ್ತಿನಗರದ ಅಕ್ಷಯನಗರದ ನಿವಾಸಿಯಾಗಿರುವ ಮಹಿಳೆಯು ಬಾತ್ ರೂಂನ ಕಿಟಕಿಯ ಬಳಿ ಮೊಬೈಲ್ ನೋಡಿದ್ದಾರೆ, ಆಕೆ ಹೊರಗೆ ಬಂದಾಗ, ಅಲ್ಲಿ ಯಾರೂ ಕಾಣಲಿಲ್ಲ. ಹೀಗಾಗಿ ಅಲ್ಲಿದ್ದ ಇನ್ನೊಬ್ಬ ತರಬೇತುದಾರನನ್ನು ಪ್ರಶ್ನಿಸಿದ್ದಾರೆ.
ತನ್ನ ಅನುಮಾನವನ್ನು ದೃಢಪಡಿಸಲು ಆಕೆ ಮ್ಯಾನೇಜರ್ಗೆ ದೂರು ನೀಡಿ, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿಯು ಫೋಟೋ ತೆಗೆಯುವುದು ಕಂಡು ಬಂದಿದೆ. ಸಂತ್ರಸ್ತೆ ಐಟಿ ಉದ್ಯೋಗಿಯಾಗಿದ್ದು, ತನ್ನ ಕುಟುಂಬವನ್ನು ಸಂಪರ್ಕಿಸಿದ ನಂತರ ಮಹಿಳೆ ಮರು ದಿನ ತನ್ನ ಫಿಟ್ನೆಸ್ ಕೋಚ್ ಎಚ್ಎಸ್ ಸಿಬಿಯಾಚನ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಮಹಿಳೆ ಎರಡು ತಿಂಗಳ ಹಿಂದೆ ಬ್ಯಾಡ್ಮಿಂಟನ್ ಮತ್ತು ಈಜು ಕಲಿಯಲು ಫಿಟ್ನೆಸ್ ಸೆಂಟರ್ಗೆ ಸೇರಿದ್ದರು.
ಈಜು ತರಗತಿ ಮುಗಿಸಿ ಸ್ನಾನ ಮಾಡುತ್ತಿದ್ದಾಗ ಬಾತ್ ರೋಮ್ನ ಕಿಟಕಿಯ ಮೂಲಕ ಯಾರೋ ಮೊಬೈಲ್ನಲ್ಲಿ ಫೋಟೋ ತೆಗೆಯುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಹೊರಗೆ ಬಂದರು, ಆದರೆ ಅಲ್ಲಿ ಯಾರೂ ಇರಲಿಲ್ಲ. ನಂತರ ಆಕೆ ಮ್ಯಾನೇಜರ್ ದೀಪಕ್ ಅವರನ್ನು ಸಂಪರ್ಕಿಸಿದರು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಆಕೆಯ ತರಬೇತುದಾರ ತನ್ನ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವುದರ ಬಗ್ಗೆ ತಿಳಿಯಿತು ಎಂದು ಸಂತ್ರಸ್ತೆಯ ದೂರಿನಲ್ಲಿ ತಿಳಿಸಲಾಗಿದೆ.
ತರಬೇತುದಾರನನ್ನು ಬಂಧಿಸಲಾಗಿದೆ. ಈತ ಕೇರಳ ಮೂಲದವನು. ಆತನ ಮೊಬೈಲ್ನಿಂದ ಫೋಟೋ ಮತ್ತು ವೀಡಿಯೊಗಳನ್ನು ಅಳಿಸಿದ್ದಾರೆ ಎಂದು ವರದಿ ಮಾಡಿದ್ದರಿಂದ ಅವರ ಮೊಬೈಲ್ ಜಪ್ತಿ ಮಾಡಿ ಡೇಟಾವನ್ನು ಹಿಂಪಡೆಯಲು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.
ಜಿಮ್ನ ಮ್ಯಾನೇಜರ್ ಮತ್ತು ಇತರ ತರಬೇತುದಾರರಿಗೆ ಆರೋಪಿ ವಿರುದ್ಧ ಈ ಹಿಂದೆ ಯಾವುದೇ ರೀತಿಯ ದೂರು ದಾಖಲಾಗಿದೆಯೆ ಎಂದು ಪರಿಶೀಲಿಸಲು ಸೂಚಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಆತ ಹವ್ಯಾಸಿ ಅಫರಾಧಿಯಲ್ಲ. ಮಹಿಳೆಯ ಗಂಭೀರ ಆರೋಪ ಮಾಡಿರುವ ಕಾರಣ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಮ್ ಮ್ಯಾನೇಜ್ಮೆಂಟ್ಗೆ ಸೂಚಿಸಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಸಿ ಅಡಿಯಲ್ಲಿ ವೋಯರಿಸಂ ಪ್ರಕರಣವ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.