ಮೈಸೂರು: ಹುಣಸೂರು ತಾಲೂಕಿನ ಕೊತ್ತೇಗಾಲ ಗೇಟ್ ಬಳಿ ವೇಗವಾಗಿ ಬಂದ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಅತ್ತಿಗುಪ್ಪೆ ಗ್ರಾಮದ ನಾಗರಾಜು (48) ಹಾಗೂ ಶಿವರಾಜು (45) ಎಂದು ಗುರುತಿಸಲಾಗಿದೆ.ಮೃತರಲ್ಲಿ ನಾಗರಾಜು ಮತ್ತು ಶಿವರಾಜು ಕೂಲಿ ಕಾರ್ಮಿಕರಾಗಿದ್ದು, ಅವರು ಹುಣಸೂರು ಕಡೆಯಿಂದ ಸ್ವಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಮಡಿಕೇರಿ ಕಡೆಯಿಂದ ಬಂದ ಜೀಪ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಷ್ಟದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ ಇವರ ಸಾವು ಕುಟುಂಬಕ್ಕೆ ಭಾರಿ ಸಂಕಷ್ಟವನ್ನು ಉಂಟು ಮಾಡಿದೆ.ಈ ದಾರಿಯಲ್ಲಿ ವಾಹನಗಳ ಅಪರಿಮಿತ ವೇಗ ಭಾರಿ ಅಪಾಯವನ್ನು ತಂದೊಡ್ಡಿದೆ ಎಂದು ಹೇಳಲಾಗುತ್ತಿದೆ. ವಾಹನಗಳ ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.