ದೊಡ್ಡಬಳ್ಳಾಪುರ: ದಕ್ಷಿಣ ಭಾರತ ಅಂತರ್ ವಿಶ್ವ ವಿದ್ಯಾಲಯ ಯೋಗ ಸ್ಪರ್ಧೆಗೆ ಅಮರನಾಥ್ ಯೋಗ ಕೇಂದ್ರದ ವಿನುತ ಗೌಡ, ಪಾವನಿ, ವರುಣ್ ಆಯ್ಕೆ.
ಇತ್ತೀಚಿಗೆ ನಗರದಲ್ಲಿ ನಡೆದ ಬೆಂಗಳೂರು ವಿಶ್ವ ವಿದ್ಯಾಲಯ ಯೋಗ ಸ್ಪರ್ಧೆಯಲ್ಲಿ ಅಮರನಾಥ್ ಯೋಗ ಕೇಂದ್ರ, ದೊಡ್ಡಬಳ್ಳಾಪುರದ ಇಲ್ಲಿ ತರಬೇತಿ ಪಡೆದ ಯೋಗ ಪಟುಗಳಾದ ಪಾವನಿ ಡಾ. ಎನ್ಎಸ್ಎಎಂ ಪ್ರಥಮ ದರ್ಜೆ ಕಾಲೇಜು ಸಿಂಗನಾಯಕನಹಳ್ಳಿ, ವಿನುತಾ ಗೌಡ ನಾಗಾರ್ಜುನ ಪ್ರಥಮ ದರ್ಜೆ ಕಾಲೇಜು, ವರುಣ್ ಬಿಷಪ್ ಪ್ರಥಮ ದರ್ಜೆ ಕಾಲೇಜ್ ಯಲಹಂಕ ಈ ಯೋಗಪಟುಗಳು ಆಯ್ಕೆಯಾಗಿದ್ದಾರೆ.
ಇವರು ದಿ.01.12.2023 ರಿಂದ 03.12.2023ರವರೆಗೆ ಚೆನ್ನೈನಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರ ವಿಶ್ವ ವಿದ್ಯಾಲಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ತಂಡವು ದಿನಾಂಕ 29.11.2023ರಂದು ಬೆಂಗಳೂರು ಇಲ್ಲಿಂದ ಪ್ರಯಾಣ ಬೆಳೆಸಲಿದ್ದಾರೆ.
ಸ್ಪರ್ಧಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಎಂ. ಟಿ. ಬಾಲಕೃಷ್ಣ, ಕಾರ್ಯದರ್ಶಿ ಲಕ್ಷ್ಮೀ ಅಮರನಾಥ್, ಸಂಸ್ಥಾಪಕರಾದ ಬಿ. ಜಿ. ಅಮರನಾಥ್, ಉಪಾಧ್ಯಕ್ಷರು ಕರ್ನಾಟಕ ಯೋಗ ಅಸೋಸಿಯೇಷನ್, ಪೋಷಕರಾದ ತ. ನ. ಪ್ರಭುದೇವ್ ನಗರ ಸಭಾ ಸದಸ್ಯರು, ಮುಂತಾದವರು ಅಭಿನಂದಿಸಿದ್ದಾರೆ.