ದೇವನಹಳ್ಳಿ: ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ ಗೌಡ ಅವರ ಅಧ್ಯಕ್ಷತೆಯಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-2024 ರ ಪ್ರಯುಕ್ತ ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮೀಪದ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಸಹ ಮತದಾರರ ಪಟ್ಟಿಯ ಪರಿಷ್ಕರಣೆಗೆ ಅನುಕೂಲ ಪಡೆಯಲು ಅರಿವು ಮೂಡಿಸಲಾಯಿತು.
ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ಅನ್ನು ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲು ಕಾಲೇಜು ಸಭಾಂಗಣದಲ್ಲಿ ಹೊಸ ಮತದಾರರ ನೋಂದಣೆಗಾಗಿ ನಮೂನೆ-6, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಗೆ ನಮೂನೆ-6(ಬಿ) ಮತ್ತು ವಾಸಸ್ಥಳ ಬದಲಾವಣೆ ಒಳಗೊಂಡ ಇತರೆ ತಿದ್ದುಪಡಿಗಾಗಿ ನಮೂನೆ-8 ಅರ್ಜಿಗಳನ್ನು ಬಿ.ಎಲ್.ಓ ಗಳಿಗೆ ನೀಡುವ ಅಥವಾ ಗಿಊಂ ಂಠಿಠಿ ಮುಖಾಂತರ ಸಲ್ಲಿಸುವ ಕುರಿತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಶ್ರೀ ಮಂಜಯ್ಯ, ತಾಲ್ಲೂಕು ದಂಢಾಧಿಕಾರಿಗಳ ಕಚೇರಿ ರಮೇಶ, ಸಹಾಯಕ ನಿರ್ದೇಶಕರು, ಅಮರನಾರಾಯಣಸ್ವಾಮಿ, ಮಂಜುನಾಥ ಪುರಸಭೆ ಪಾಪಣ್ಣ, ರಘು ರಾಜ್ಯಶಾಸ್ತ್ರ ವಿಭಾಗ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.