ಹೊಸಕೋಟೆ: ಶೂದ್ರ ಜಾನಾಂಗದಲ್ಲಿ ಹುಟ್ಟಿ ಸಾಮಂತ ರಾಜರಾಗಿ ಕ್ಷತ್ರಿಯರಾಗಿ ನಂತರ ಸಮಾಜ ತಿದ್ದುವಂತಹ ಬ್ರಾಹ್ಮಣತ್ವ
ವನ್ನು ಮೈಗೂಡಿಸಿ ಸಮಾಜದ ಉದ್ದಾರಕ್ಕೆತಮ್ಮ ಅತ್ಯಮೂಲ್ಯವಾದ ದಾಸ ತತ್ವಗಳನ್ನುಜನತೆಗೆ ನೀಡಿದ ದಾಸ ಶ್ರೇಷ್ಟರು ಕನಕದಾಸರು.
ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪಾಲಿಸುವುದರಿಂದ ಸ್ವಸ್ಥ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ಅವರು ನಗರದ ತಾಲೂಕು ಕಚೇರಿಯ ಆವರಣದಲ್ಲಿ 536ನೇ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಬೀಕರ ಬರಗಾಲ ವಿದ್ದರೂ ಸರಳವಾಗಿ ಆರ್ಥಗರ್ಭಿತವಾಗಿ ಕನಕ ಜಯಂತಿಯನ್ನು ಸಮುದಾಯದ ಮುಖಂಡರು ಆಯೋಜನೆ ಮಾಡಿ ಎಲ್ಲಾ ಜನಾಂಗದವರನ್ನು ಒಗ್ಗಟ್ಟಾಗಿ ಒಂದೆಡೆ ಸೇರಿಸಿ ಎಲ್ಲರ ಸಹಕಾರದಿಂದ ಕಾರ್ಯಕ್ರಮವನ್ನು ಆಚಾರಿಸುವ ಮೂಲಕ ಕನಕ ದಾಸರ ದಾಸಪದದಂತೆ ಕುಲ ಕುಲ ಎಂದು ಒಡೆದಾಡದಿರು ಹಾಡಿನ ಮಹತ್ವವನ್ನು ಎತ್ತಿ ಹಿಡಿದು ಮಾದರಿಯಾಗಿದ್ದಾರೆ.
ಕನಕದಾಸರು ಸಮಾಜದ ಉನ್ನತಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾನ್ ತ್ಯಾಗಿಗಳಾಗಿ, ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಸಮಾಜದ ಎಲ್ಲಾ ವರ್ಗಗಳ ದ್ವನಿಯಾಗಿದ್ದರು. ಪೂರ್ವದಲ್ಲಿ ಸಾಮಂತ ರಾಜರಾಗಿ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಆಳ್ವಿಕೆ ನಡೆಸಿದರು ತದ ನಂತರ ತಮ್ಮಲ್ಲಿದ್ದ ಎಲ್ಲಾ ಆಸ್ತಿಯನ್ನು ಸಮಾಜದ ಒಳಿತಿಗೆ ದಾನ ಮಾಡಿ ದಾಸರಾದ ಅವರ ಜರಿತ್ರೆ ಪ್ರತಿಯೊಬ್ಬರೂ ತಿಳಿಯಬೇಕು ಎಂದ ಅವರು ಬಸವಣ್ಣನವರು ಪುರಂದರದಾಸರು ಕನಕದಾಸರ ಜೀವನ ಚರಿತ್ರೆಗಳನ್ನು ಇಂದಿನ ಯುವಕರಿಗೆ ತಿಳಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಶ್ರೀಮಂತಿಕೆಯನ್ನು ಎತ್ತಿಹಿಡಿಯಬೇಕು ಎಂದರು.
ತಹಸೀಲ್ದಾರ್ ಎಂ. ವಿಜಯಕುಮಾರ್ ಮಾತನಾಡಿ 16 ನೇ ಶತಮಾನದಲ್ಲಿ ಸುಮಾರು 316 ದಾಸ ಕೀರ್ತನೆಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕನಕದಾಸರು ಮುನ್ನುಡಿಯನ್ನು ಬರೆದಿದ್ದರು, ಕನಕದಾಸರ ಜಯಂತಿ ಆಚರಣೆ ಎಲ್ಲರಿಗೂ ಆದರ್ಶವಾಗಲಿ ಎಂಬ ಉದ್ದೇಶದಿಂದ ಕನಕದಾಸರ ಜಯಂತಿ ಆಚರಣೆಯನ್ನು ಸರಕಾರಿ ಕಾರ್ಯಕ್ರಮವಾಗಿ ರೂಪಿಸಿದೆ. ತಾಲೂಕಿನ ಎಲ್ಲಾ ಸಮುದಾಯದ ಸಾರ್ವಜನಿಕರು ಒಗ್ಗಟ್ಟಾಗಿ ಸೇರಿ ಈ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯವಾಗಿದ್ದು ಪ್ರಶಂಸನೀಯವಾಗಿದೆ ಎಂದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಾಂಸ್ಕøತಿಕ ಕಲಾ ತಂಡಗಳೊಂದಿಗೆ ಬೆಳ್ಳಿ ರಥದಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಕಲ್ಲಪ್ಪ, ಮುನಿಶಾಮಣ್ಣ, ಮಲ್ಲಸಂದ್ರ ಶೇಷಪ್ಪ, ನಾರಾಯಣಸ್ವಾಮಿ, ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಚ್ಚೇಗೌಡ, ಮುಖಂಡರಾದ ಎಚ್.ಎಂ. ಸುಬ್ಬರಾಜ್, ಡಿ.ಟಿ. ವೆಂಕಟೇಶ್, ಗುಟ್ಟಹಳ್ಳಿ ನಾಗರಾಜ್, ಗಣೇಶ್, ಶ್ರೀಧರ್, ಚಂದ್ರೇಗೌಡ, ಕೃಷ್ಣಮೂರ್ತಿ, ಮುನಿಕೃಷ್ಣ, ಭತ್ಯಪ್ಪ, ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.