ಯಲಹಂಕ: ಯಲಹಂಕ ಭಾಗದ ಸಿಂಗನಾಯಕನಹಳ್ಳಿ ಅರುಣೋದಯ ಲೇಔಟ್ ವಾಸಿಗಳಿಂದ, ಜನಪ್ರಿಯ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಶ್ರೀಮತಿ ವಾಣಿಶ್ರೀ ವಿಶ್ವನಾಥ್ ರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಅರುಣೋದಯ ಲೇಔಟ್ ನಲ್ಲಿ ಅಪಾರ ಜನತೆ ವಾಸವಾಗಿ, ಜೀವನ ಸಾಗಿಸುತ್ತಿದ್ದಾರೆ.ಲೇಔಟ್ ಗೆ ಪ್ರವೇಶಿಸಲು ದಾರಿ ಇಲ್ಲದಿದ್ದಾಗ ಜನತೆ ಶಾಸಕರಾದ ಶ್ರೀಯುತ ಎಸ್ ಆರ್ ವಿಶ್ವನಾಥ್ ರವರ ಮೊರೆ ಹೋಗಿದ್ದು, ಸ್ಪಂದಿಸಿದ ಶಾಸಕರು ರಸ್ತೆ ನಿರ್ಮಿಸಲು ಜಮೀನು ದಾರರಾದ ಅರವಿಂದ್ ಮತ್ತಿತರೊಡನೆ ಮಾತನಾಡಿ ರಸ್ತೆಗೆ ಬೇಕಾದ ಜಾಗವನ್ನು ಇವರಿಂದ ಪಡೆದುಕೊಂಡು ಕಾಂಕ್ರೀಟ್ ರಸ್ತೆ ನಿರ್ಮಿಸಿ ರುತ್ತಾರೆ ಮತ್ತೆ ತರಹ ಅಭಿವೃದ್ಧಿ ಕೆಲಸಗಳನ್ನು ಲೇಔಟ್ ವಾಸಿಗಳಿಗೆ ಮಾಡಿರುತ್ತಾರೆ ಈ ಜನತೆ ತಮಗೆ ಮಾಡಿದ ಉಪಕಾರವನ್ನು ಸ್ಮರಿಸಿ, ಶಾಸಕ ಎಸ್ .ಆರ್ ವಿಶ್ವನಾಥ್ ಮತ್ತು ಶ್ರೀಮತಿ ವಾಣಿಶ್ರೀ ವಿಶ್ವನಾಥ್ ರನ್ನು,ರಸ್ತೆಗಾಗಿ ಜಾಗ ನೀಡಿದ ಜಮೀನ್ದಾರರನ್ನು ಹಾಗೂ ಮತ್ತಿತರರನ್ನು ಸಂಘದ ಪದಾಧಿಕಾರಿಗಳು ಅಭಿನಂದಿಸಿ, ಸನ್ಮಾನಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್ ಆರ್ ವಿಶ್ವನಾಥ್ ಉಪಕಾರ ಸ್ಮರಿಸಿ ಅಭಿನಂದಿಸಲು ಮುಂದಾದ ಲೇಔಟ್ ವಾಸಿಗಳಿಗೆ ಅಭಿನಂದನೆಗಳನ್ನು ತಿಳಿಸಿ, ನಿಮ್ಮ ಕುಟುಂಬದಲ್ಲಿ ನಾನು ಒಬ್ಬನೆಂದು, ನಿಮ್ಮ ಸೇವೆಗೆ ಸದಾ ಸಿದ್ದ ಎಂದರು. ನಿವಾಸಿಗಳು ಸ್ವಚ್ಚತೆ ಕಾಪಾಡಲೆಂದು ಹಸಿ ಕಸ ಒಣ ಕಸ ಬೇರ್ಪಡಿಸಲು ಕಸದ ಬುಟ್ಟಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅರುಣೋದಯ ಲೇಔಟ್ ವಾಸಿಗಳ ಸಂಘದ ಪದಾಧಿಕಾರಿಗಳಾದ ರಾಜ ಶೇಖರ್, ಆನಂದ ರೆಡ್ಡಿ, ಶಿವಶಂಕರ್, ಶ್ರೀಕಾಂತ್, ಜಗದೀಶ್, ಶಿವಲಿಂಗಯ್ಯ, ನಾರಾಯಣಪ್ಪ, ವಿಶ್ವನಾಥ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.