ದೇವನಹಳ್ಳಿ: ಉತ್ತಮ ಪ್ರತಿಭೆಗೆ ಸೂಕ್ತ ವೇದಿಕೆಗಳು ಬಹ¼ ಮುಖ್ಯ ಅತ್ಯಗತ್ಯ. ಸೂಕ್ತ ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳುವುದು ಉತ್ತಮ ಎಂದು ಮುಖ್ಯೋಪಾಧ್ಯಾಯರಾದ ಗುರುಪ್ರಸಾದ್ ಕಿವಿಮಾತು ಹೇಳಿದರು.
ದೇವನಹಳ್ಳಿ ಪಟ್ಟಣದ ನ್ಯೂ ಶಾರದ ಪಬ್ಲಿಕ್ ಶಾಲೆಯಲ್ಲಿ ಸರಸ್ವತಿ ಸಂಗೀತ ವಿದ್ಯಾಲಯವು ಆಯೋಜಿಸಿದ್ದ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತ ನಾಡಿದ ಅವರು ಸ್ಪರ್ಧೆಗಳಲ್ಲಿಗೆಲುವು ಸೋಲು ಮುಖ್ಯವಲ್ಲ. ಭಾಗವಹಿಸುವುದು ಮಾತ್ರವೇ ಮುಖ್ಯವಾಗುತ್ತದೆ.
ಗೆಲುವು ಸಿಕ್ಕಾಗ ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ತಿಳಿಯಬೇಕು ಸೋತಾಗ ಗೆಲ್ಲಬೇಕು ಎನ್ನುವ ಛಲ ನಮ್ಮಲ್ಲಿ ಬರಬೇಕು ಎಂದು ಹೇಳಿದರು.ಸರಸ್ವತಿ ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಮಂಜುನಾಥ ಜಿ ಮಾತನಾಡಿ ಶಾಲಾ ಹಂತದಲ್ಲಿಯೇ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುವುದರಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಉತ್ತಮ ಚಟುವಟಿಕೆಗಳತ್ತ ನಮ್ಮನ್ನು ತೊಡಗಿಸಿಕೊಳ್ಳುವುದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗಶಿಕ್ಷಕ ಸತೀಶಣ್ಣ ಮಕ್ಕಳಿಗೆ ನೆನಪಿನ ಶಕ್ತಿ ಮತ್ತು ಶಾರೀರಿಕ ಚಟುವಟಿಕೆಗಳ ಬಗ್ಗೆ ಉತ್ತಮ ಮಾಹಿತಿ ನೀಡಿದರು.
ಗಾಯನ ಸ್ಪರ್ಧಾ ವಿಜೇತರ ಪಟ್ಟಿ : ಕಿರಿಯರ ವಿಭಾಗ : ಸೃಷ್ಟಿ ದ್ವಿವೇದಿ – ಪ್ರಥಮ, ಶ್ರೇಯಸ್ ವಿ – ದ್ವಿತೀಯ, ಚೇತನ ಎನ್ -ತೃತೀಯ
ಹಿರಿಯರ ವಿಭಾಗ : ವರ್ಣಿಕ ಎಂ – ಪ್ರಥಮ, ಪ್ರಣತಿ ಎಂ – ದ್ವಿತೀಯ, ಯಶಸ್ವಿನಿ ಜಿ – ತೃತೀಯಇದೇ ಸಂದರ್ಭದಲ್ಲಿ ಸರಸ್ವತಿ ಸಂಗೀತ ವಿದ್ಯಾಲಯದ ಖಜಾಂಚಿ ಜಿ. ನೇತ್ರಾವತಿ, ನ್ಯೂ ಶಾರದ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಪುಷ್ಪಾಂಜಲಿ ಕೆ.ಪಿ, ಶಿಕ್ಷಕರುಗಳಾದ ವೆಂಕಟಾಚಲಯ್ಯ, ಪುಷ್ಪವತಿ, ಸುರೇಶ್, ನಾರಾಯಣಸ್ವಾಮಿ, ಅಶ್ವಿನಿ, ಸೆಲ್ವಿಯಾ, ಕಮಲಾಕ್ಷಿ, ವೀಣಾ, ಮಂಜುಳ, ಮೇಘಮಾಲ, ಅಫಿûೀನ್, ಶಿವರಂಜನಿ, ಲಾವಣ್ಯ ಮತ್ತು ಶಾಲೆಯ ಸಿಬ್ಬಂದಿಗಳು ಹಾಜರಿದ್ದರು.