ಇಷ್ಟು ದಿನ ತೆರೆಮೆರೆಯಲ್ಲಿ ತಮ್ಮ ಹೊಸ ಸಿನಿಮಾದ ಕೆಲಸ ಮಾಡುತ್ತಿದ್ದ ಯಶ್, ನಿನ್ನೆಯಿಂದ ಅಭಿಮಾನಿಗಳಿಗೆ ದಿನಕ್ಕೊಂದು ಹೊಸ ಸುದ್ದಿ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಲೋಡಿಂಗ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದವರು, ಇಂದು ತಮ್ಮ ಹೊಸ ಸಿನಿಮಾದ ಟೈಟಲ್ (Title) ಘೋಷಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 8ರಂದು ಮುಂಜಾನೆ 9.55ಕ್ಕೆ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡುವುದಾ ತಿಳಿಸಿದ್ದಾರೆ.ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗೆದ್ದು ಬೀಗಿದ್ದು ಆಗಿದೆ. ಇನ್ನೂ ಏನೇ ಇದ್ರೂ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡೊದೊಂದೇ ಬಾಕಿ. ಹೀಗಿರುವಾಗ ಅಭಿಮಾನಿಗಳ ನಿರೀಕ್ಷೆಯಂತೆ ಯಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್ ಕಡೆಯಿಂದ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಕೆಜಿಎಫ್, ಕೆಜಿಎಫ್ 2 ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಈಗ ಬಿಗ್ ಅಪ್ಡೇಟ್ ಸಿಕ್ಕಿದೆ. ‘ಲೋಡಿಂಗ್’ ಎಂಬ ಬರಹದ ಫೋಟೋವನ್ನ ನಿನ್ನೆ ಇನ್ಸ್ಟಾಗ್ರಾಂ ಮುಖಪುಟ ಬದಲಿಸಿದ್ದಾರೆ ಯಶ್. ಸಂಡೆ ಸಂಜೆ ಯಶ್ ಸಖತ್ ನ್ಯೂಸ್ ಕೊಟ್ಟಿದ್ದರು.
ರಾಕಿಭಾಯ್ ಆಗಿ ಘರ್ಜಿಸಿದ ಮೇಲೆ ಯಶ್-19 ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಲೋಡಿಂಗ್ ಎಂಬ ಬರಹದ ಮೂಲಕ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಈ ಮೂಲಕ `ಯಶ್ 19′ ಸಿನಿಮಾಗೆ ಕೌಂಟ್ ಡೌನ್ ಶುರುವಾಗಿದೆ.