ಬೆಳಗಾವಿ: ವಿಧಾನಸಭೆಯಲ್ಲಿಂದು ಪ್ರಮುಖ ನಾಯಕರ ಅನುಪಸ್ಥಿತಿ ಕಂಡುಬಂದಿತ್ತು.ಇಂದು ಬೆಳಗ್ಗೆ ಸದನ ಕಲಾಪ ಆರಂಭವಾಗುತ್ತಿದ್ದಂತೆ ಸದನದಲ್ಲಿ ಬಹುತೇಕ ಶಾಸಕರು ಹಾಜರಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಅನೇಕರು ಗೈರು ಹಾಜರಾಗಿದ್ದರು.
ಸದನದಲ್ಲಿ ಒಟ್ಟಾರೆ ಆಡಳಿತ ಪಕ್ಷ ಕಾಂಗ್ರೆಸ್ನ 55, ವಿಪಕ್ಷ ಬಿಜೆಪಿ 40 ಮತ್ತು ಜೆಡಿಎಸ್ 10 ಶಾಸಕರು ಮಾತ್ರ ಹಾಜರಾಗಿದ್ದರು.
ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರ ಅನುಪಸ್ಥಿತಿಯು ಎದ್ದುಕಂಡುಬಂದಿತು.
ಜತೆಗೆ ಬಿಜೆಪಿಯ ಶಾಸಕ ರಮೇಶ್ ಜಾರಕಿಹೊಳಿ ಸಹ ಸದನ ಕಲಾಪಕ್ಕೆ ಗೈರಾಗಿದ್ದರು. ಇಂದು ಕಲಾಪದ ವೇಳೆ ಬಹುತೇಕ ಶಾಸಕರು ತಮ್ಮ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಲು ಮುಂದಾದರು.ಪ್ರಶ್ನೋತ್ತರ ಕಲಾಪದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದು, ಸಹ ಪ್ರಮುಖವಾಗಿತ್ತು.