ಬೆಂಗಳೂರು: ಅತೀ ವೇಗದಲ್ಲಿ ಬಂದ ದ್ವಿಚಕ್ರವಾಹನ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಓರಿಯನ್ ಮಾಲ್ ಬಳಿ ಇರುವ ರಾಜಕುಮಾರ್ ಸ್ಟ್ಯಾಚು ಬಳಿ ನಿನ್ನೆ ರಾತ್ರಿ ಸುಮಾರು ಒಂದುವರೆ ಗಂಟೆಗೆ ಈ ಘಟನೆ ನಡೆದಿದ್ದು, ಯಶಸ್(28) ಎಂಬ ಯುವಕ ತೀವ್ರ ತಲೆಗೆ ಗಾಯಗೊಂಡು ಮೃತಪಟ್ಟಿರುವ ದುರ್ದೈವಿಯಾಗಿದ್ದಾನೆ.
ರಾಜಾಜಿನಗರ ನಿವಾಸಿಯಾಗಿರೋ ಮೃತ ಯುವಕ ಬಿ ಇ ಇಂಜಿನಿಯರ್ ಮುಗಿಸಿದ್ದಾನೆ ಎನ್ನಲಾಗಿದೆ.ಹೆಲ್ಮೆಟ್ ಧರಿಸದಿದ್ದರಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದು, ಈ ಸಂಬಂಧ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.