ಚನ್ನರಾಯಪಟ್ಟಣ: ಶಾಲಾ ಅಂತದಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮುಡಿಸಿದರೆ ಒಳ್ಳೆಯ ಪರಿಸರ ನಿರ್ಮಾಣವಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ವರಲಕ್ಷ್ಮಿ ಹೇಳಿದರುದೇವನಹಳ್ಳಿ ತಾಲೂಕು ಬೂದಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬ್ಯಾಂಕ್ ಆಫ್ ಬರೋಡ ವತಿಯಿಂದ ಸಸಿ ನೆಡುವ ಮುಖಾಂತರ ಪರಿಸರ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ ಇತ್ತೀಚೆಗೆ ಪರಿಸರ ಇಲ್ಲದೆ ಒಳ್ಳೆಯ ಗಾಳಿಗೆ ಗುಟ್ಟಗಾಡು ಪ್ರದೇಶಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಶಾಲಾ ಮಕ್ಕಳು ಒಂದೊಂದು ಸಸಿ ನೆಟ್ಟು ಅದನ್ನು ಪೋಷಿಸಿದರೆ ಒಳ್ಳೆಯ ಗಾಳಿ ಸಿಗುತ್ತದೆ ಪರಿಸರ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದರು.
ಗ್ರಾಪಂ ಸದಸ್ಯ ಕೋಟಿ ನಾರಾಯಣಸ್ವಾಮಿ ಮಾತನಾಡಿ ಇಂತಹ ಸಂಸ್ಥೆಯವರು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಿದರೆ ಮನುಷ್ಯನು ಉಸಿರಾಡಬೇಕಾದರೆ ಒಳ್ಳೆಯ ಗಾಳಿ ಸಿಗುತ್ತದೆ ಕರೋನಾ ಸಂದರ್ಭದಲ್ಲಿ ಉಸಿರಾಡಬೇಕಾದರೆ ಒಳ್ಳೆಯ ಗಾಳಿಗೂ ಹಣ ಕೊಟ್ಟು ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಒಳ್ಳೆಯ ಪರಿಸರ ಇದ್ದರೆ ಮನುಷ್ಯನಿಗೆ ಒಳ್ಳೆಯ ಗಾಳಿ ಸಿಗುತ್ತದೆ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತದೆ ಶಾಲಾ ಹಂತದ ಮಕ್ಕಳು ಸಸಿ ನೆಟ್ಟು ಊಟ ಮಾಡಿದ ಮೇಲೆ ಕೈ ಹಾಗೂ ತಟ್ಟೆ ತೊಳೆಯುವ ನೀರನ್ನು ಸಸಿಗೆ ಹಾಕಿದರೆ ಗಿಡ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ರಿಜ್ವಾನ್ ನಾಜಿರ್ ಅಹಮದ್ ಮುಖಂಡರಾದ ನಾರಾಯಣಸ್ವಾಮಿ ಶಾಲಾ ಶಿಕ್ಷಕರುಂದದವರು ಬ್ಯಾಂಕ್ ಆಫ್ ಬರೋಡ ಸಿಬ್ಬಂದಿ ವರ್ಗದವರು ಇನ್ನು ಮುಂತಾದವರು ಹಾಜರಿದ್ದರು.