ಬೆಂಗಳೂರು: ಕ್ಲಬ್ ಕಬಾನ ಅಮ್ಯೂಜ್ ಮೆಂಟ್ ಪಾರ್ಕ್ ಬೆಂಗಳೂರಿನಲ್ಲಿ ಐಐಬಿಎಸ್ ಕಾಲೇಜು ಆಯೋಜಿಸಿರುವ 2023 ನೇ ಸಾಲಿನ ಐಐಬಿಎಸ್ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದಲ್ಲಿ ಸುಮಾರು 400 ಹಳೆಯ ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಭಾಗಿಯಾಗಿದ್ದರು.
ಪ್ರಸ್ತುತ ಟಾಪ್ ಕಂಪನಿಗಳ ಸಿಇಒಗಳಾದ ಜಿ ಎಸ್ ಫ್ಯಾಷನ್ ಕಂಪನಿಯ ಸಿಇಒ ಗೋವಿಂದ ಸೋಮಾನಿ, 99 ಅವೆನ್ಯೂಸ್ ಮತ್ತು ಐವಾ ಡೆಕೋರ್ ಕಂಪನಿಯ ಸಿಇಒ ಧರ್ಮತೇಜ, ಆಗ್ರೋ ಫೈಬರ್ ನ ಸುಮನ್ ನಾಯ್ಡು ಮುಂತಾದ ವಿವಿಧ ಕಂಪನಿಗಳ ಸಿಇಒಗಳು ಉಪಸ್ಥಿತರಿದ್ದರು.
15 ವರ್ಷಗಳಿಂದ ಐಐಬಿಎಸ್ ಹಳೆಯ ವಿದ್ಯಾರ್ಥಿಗಳೊಂದಿಗೆ 7000 ಕ್ಕೂ ಹೆಚ್ಚು ಸದಸ್ಯರು ಸದಸ್ಯತ್ವವನ್ನು ಹೊಂದಿದ್ದಾರೆ ಮತ್ತು ಸದಸ್ಯರು ಪ್ರಪಂಚದ ಎಲ್ಲಾ ಖಂಡಗಳಲ್ಲಿ ಉಳಿದುಕೊಂಡಿದ್ದಾರೆ. ಪ್ರಸ್ತುತ ಐಐಬಿಎಸ್ ಹಳೆಯ ವಿದ್ಯಾರ್ಥಿಗಳ ಶಾಖೆಗಳು ದುಬೈ ಮತ್ತು ಬೆಂಗಳೂರಿನಲ್ಲಿವೆ ಆದರೆ ಐಐಬಿಎಸ್ ನ ಕಾರ್ಯಸೂಚಿಯು ಯು.ಕೆ, ಯು.ಎಸ್, ಆಸ್ಟ್ರೇಲಿಯ ಮತ್ತು ಭಾರತದ ಇತರ ಮಹಾನಗರಗಳಲ್ಲಿ ಹಳೆಯ ವಿದ್ಯಾರ್ಥಿಗಳ ಶಾಖೆಗಳನ್ನು ಸ್ಥಾಪಿಸುವುದು ಐಐಬಿಎಸ್ ಕಾಲೇಜಿನ ಮುಖ್ಯ ಉದ್ದೇಶವಾಗಿದೆ ಹಾಗೂ ಇತ್ತೀಚಿಗೆ ಐಐಬಿಎಸ್ ನ್ಯಾಕ್ ‘ಎ’ ದರ್ಜೆಯೊಂದಿಗೆ ಮಾನ್ಯತೆ ಪಡೆದಿದೆ ಇದು ಸಂಸ್ಥೆಗೆ ಹೆಚ್ಚುವರಿ ಕಿರೀಟವಾಗಿದೆ ಹಾಗೂ ಇದನ್ನು ಸ್ವಾಯತ್ತ ಕಾಲೇಜು ಮಾಡಲು ಪ್ರಯತ್ನಿಸುತ್ತಿದೆ ಎಂದು ಡಾ.ಜೈ ಪ್ರಕಾಶ್ ಐಐಬಿಎಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಗೌರವಾನ್ವಿತ ಅತಿಥಿ, ಕಿರಿಯ ಪ್ರೇರಕ ಭಾಷಣಕಾರಹಾಗೂ ಐಐಬಿಎಸ್ ಕಾಲೇಜಿನ ಬ್ರಾಂಡ್ ಅಂಬಾಸಿಡರ್ರಾದ ಅಕ್ಷಿತ್ ಕೆನಡಿಯ ಅವರು ಮಾತನಾಡಿ ಐಐಬಿಎಸ್ ಕಾಲೇಜು ವಿಶ್ವ ಮಟ್ಟದಲ್ಲಿ ಅತ್ಯುತ್ತಮ ಕಾಲೇಜು ಆಗಲಿದೆ ಏಕೆಂದರೆ ವಿದ್ಯಾರ್ಥಿಗಳಿಗೆ ಒದಗಿಸುವ ಸೌಲಭ್ಯಗಳು ವಿಶ್ವ ದರ್ಜೆಯ ಮಟ್ಟದ್ದಾಗಿದೆ ಮತ್ತು ಯಾವುದೇ ಸಂಸ್ಥೆಗಳು ಇದನ್ನು ಸೋಲಿಸಲು ಸಾಧ್ಯವಿಲ್ಲ ಎಂದರು.
ಐಐಬಿಎಸ್ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಂಶಿಯವರು ನಾವು ಎಲ್ಲಾ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ಮತ್ತು ಭವಿಷ್ಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಉನ್ನತವಾದ ಯೋಚನೆ ಮತ್ತು ಯೋಜನೆಗಳಲ್ಲಿ ಸಹಾಯ ಮಾಡುತ್ತೇವೆ ಮತ್ತು ನಾವೆರೆಲ್ಲರೂ ಐಐಬಿಎಸ್ ಅನ್ನು ಭಾರತದಲ್ಲಿ ನಂ-1 ಸಂಸ್ಥೆಯಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಈ ಸಮಾರಂಭಕ್ಕೆ ಐಐಬಿಎಸ್ ಕಾಲೇಜಿನ ಶೈಕ್ಷಣಿಕ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ. ಟಿ.ಜಗ್ಗಯ್ಯ, ಐಐಬಿಎಸ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಯಪ್ರಕಾಶ್, ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಜನ್ ರಾಮ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಮಹೇಶ್ವರ ರೆಡ್ಡಿ ಹಾಗೂ ಸಂಸ್ಥೆಯ ಎಲ್ಲಾ ಹಳೆಯ ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.