ಯಲಹಂಕ: ಅಟ್ಟೂರಿನ ಸಮುದಾಯ ಭವನದಲ್ಲಿ ವಿಶ್ವವಾಣಿ ಫೌಂಡೇಷನ್. ರೋಟರಿ ಕ್ಲಬ್.ಅಟ್ಟೂರು ವರ್ತಕರ ಸಂಘದ ಸಹಯೋಗದಲ್ಲಿ ಜರುಗಿತು. ಕಾರ್ಯಕ್ರಮವನ್ನು ಬಿಜೆಪಿ ಯುವ ಮುಖಂಡ,ವಿಶ್ವವಾಣಿ ಪೌಂಡೇಶನ್ ಟ್ರಸ್ಟಿ, ಆಲೋಕ ವಿಶ್ವನಾಥ್ ಉದ್ಘಾಟಿಸಿದರು.
4ನೇ ಕೊನೆಯದಿನದ ಉಚಿತ ಅರೋಗ್ಯ ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ಕ್ಯಾನ್ಸರ್ ತಪಾಸಣೆ ಮತ್ತು ಆಯುರ್ವೇದ ಗಂಟು/ಮೂಳೆಯ ತಪಾಸಣೆ ನೆಡೆದು,ಇದರ ಪ್ರಯೋಜನವನ್ನು ಜನತೆ ಪಡೆದರು. ಹಾಗೂ ಸೇವೆಸಲ್ಲಿಸಿದ ಡಾಕ್ಟರ್ ಗಳಿಗೆ ಅಟ್ಟೂರು ವರ್ತಕರ ಸಂಘದ ಪದಾಧಿಕಾರಿಗಳಿಂದ ಸನ್ಮಾನಿಸಲಾಯಿತು.
ಬಡ ವೃದ್ದರಿಗೆ ಚಳಿಗಾಲವಿರುವುದರಿಂದ ಹೊದಿಕೆ ಸಹ ರೋಟರಿಯ ವರಿಂದ ವಿತರಿಸಲಾಯಿತು, ಈ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಬಾಗಿಯಾಗಿ ಸಹಕರಿಸಿದ ಎಲ್ಲಾ ಸಂಘಟನೆಗಳ ಪದಾಧಿಕಾರಿ, ಕಾರ್ಯಕರ್ತರನ್ನು ಅಭಿನಂದಿಸಲಾಯಿತು. ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದ ಪ್ರಯೋಜನವನ್ನು ಅಟ್ಟೂರು ಸುತ್ತಮುತ್ತಲಿನ ಜನತೆ ಪಡೆದುಕೊಂಡು ಯಶಸ್ವಿಯಾಗಿ ಜರುಗಿತು.