ಪಾಂಡವಪುರ: ತಾಲೂಕಿನ ಚಿನಕುರಳಿ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಜೆವಿಕೆ ಆಶ್ರಯದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯರಾಮ್ ಬಿ.ನೆಲ್ಲಿತ್ತಾಯ ಮಾತನಾಡಿ, ಮಹಿಳೆಯರು ಸಾಮಾಜಿಕ ಬದ್ದತೆಯನ್ನು ಅರಿತು ಜವಾಬ್ದಾರಿಯುತವಾಗಿ ಕೌಟುಂಬಿಕ ನಿರ್ವಹಣೆಯನ್ನು ಮಾಡಬೇಕು. ನಮ್ಮ ದೇಶದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನವಿದೆ.
ಮೊದಲ ಆದ್ಯತೆಯನ್ನು ಮಹಿಳೆಗೆ ನೀಡಿ ಮಾತೃದೇವೋಭವ ಅನ್ನುವ ದೇಶ ನಮ್ಮದು ಎಂದರು.ಮಹಿಳೆಯರು ಸದೃಢರಾಗಬೇಕಾದರೆ ಸ್ವಉದ್ಯೋಗದ ಬಗ್ಗೆ ಗಮನಹರಿಸಬೇಕು. ಸಾಮಾಜಿಕಅನಿಷ್ಠ ಪದ್ದತಿಗಳಾದ ಬಾಲ್ಯವಿವಾಹ ಮತ್ತುದುಶ್ಚಟಗಳ ಕುರಿತು ಗಮನಹರಿಸದೆ ದುಷ್ಪರಿಣಾಮಗಳ ಬಗ್ಗೆ ಅರಿವಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಾಗಮ್ಮ ಸಿ.ಎಸ್.ಪುಟ್ಟರಾಜು ಮತ್ತು ಸಂಪನ್ಮೂಲ ವ್ಯಕ್ತಿ ಜಾನಪದ ವಿದ್ವಾಂಸೆ, ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪನ್ಯಾಸಕಿ ಡಾ.ಜಯಲಕ್ಷ್ಮಿ ಸೀತಾಪುರ ಮಾತನಾಡಿ, ಸರಳಜೀವನ ಮತ್ತು ದುಂದುವೆಚ್ಚಗಳಿಗೆ ಕಡಿವಾಣಈ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಚಿನಕುರಳಿ ಗ್ರಾಮಪಂಚಾಯತ್ ಅದ್ಯಕ್ಷೆ ಗಾಯತ್ರಿ ಅದ್ಯಕ್ಷತೆ ವಹಿಸಿದ್ದರು. ಮೂಕಾಂಬಿಕಾ ಯೋಜನಾದಿಕಾರಿ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ ಮೈಸೂರು ಪ್ರಾದೇಶಿಕ ವಿಭಾಗ, ಜಿ.ಪಂ ಮಾಜಿ ಸದಸ್ಯೆ ಶಾಂತಲಾರಾಮಕೃಷ್ಣೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಯಶವಂತ್, ತೀರ್ಪುಗಾರರಾಗಿ ಭಾಗವಹಿಸಿದ್ದ ಜನಜಾಗೃತಿ ವೇದಿಕೆ ಸದಸ್ಯ ಹಾರೋಹಳ್ಳಿ ಧನ್ಯಕುಮಾರ್, ಹಿರಿಯ ಪತ್ರಕರ್ತ, ದಿ ಡೈಲಿ ನ್ಯೂಸ್ ಪತ್ರಿಕೆ ಜಿಲ್ಲಾ ಪ್ರಧಾನ ವರದಿಗಾರ ಎನ್.ಕೃಷ್ಣೇಗೌಡ ಇತರರು ಉಪಸ್ಥಿತರಿದ್ದರು.
ಸಾಧಕರಾದ ಜಾನಪದ ಕ್ಷೇತ್ರದ ನಾಗಮ್ಮ ಕೃಷ್ಣಯ್ಯ ಮತ್ತು ಸ್ವ ಉದ್ಯೋಗ ಕ್ಷೇತ್ರದ ಜ್ಯೋತಿ ಯವರು ಸನ್ಮಾನಿಸಲಾಯಿತು.
ಜ್ಞಾನ ವಿಕಾಸದ ಕೇಂದ್ರದ ಸದಸ್ಯರಿಗೆ ರಂಗೋಲಿ,ಪುಷ್ಪಗುಚ್ಚ,ಪೌಷ್ಠಿಕ ಆಹಾರ, ಕರಕುಶಲ ಪ್ರದರ್ಶನ, ಸಮೂಹ ನೃತ್ಯ ಸ್ಪರ್ಧೆಗಳನ್ನು ಅಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ದ ನಿರೂಪಣೆಯನ್ನು ಸುನಂದಾ ಸ್ವಾಗತವನ್ನು ಪ್ರಾದೇಶಿಕ ವಿಬಾಗದ ಜ್ಞಾನ ವಿಕಾಸ ಕಾರ್ಯಕ್ರಮಗಳ ಯೋಜನಾದಿಕಾರಿ ಮೂಕಾಂಬಿಕಾ ನೆರವೇರಿಸಿದರು.ಜ್ಞಾನ ವಿಕಾಸ ಸಮನ್ವಯಾದಿಕಾರಿ ತೇಜಸ್ವಿನಿ ವಂದಿಸಿದರು.