ಚನ್ನರಾಯಪಟ್ಟಣ: ಭೂಸ್ವಾದಿನಾ ವಿರೋಧಿ ರೈತರ ಹೋರಾಟ 640 ದಿನ ಆಗಿದೆ ನೂತನ ನಾಡ ಕಚೇರಿ ಕಟ್ಟಡ ಉದ್ಘಾಟನೆ ನಿಗದಿಯಾಗಿದೆ ರೈತರಭೂಮಿ ಇಲ್ಲದ ಮೇಲೆ ನಾಡ್ ಕಚೇರಿ ಏಕೆ ಬೇಕು ಎಂದು ರೈತರ ಪ್ರಶ್ನೆಯಾಗಿದೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ನಾಡಕಚೇರಿ ಮುಂಭಾಗ ಭೂಸ್ವಾಧೀನ ವಿರೋಧಿ ಹೋರಾಟ ರೈತರು 640ನೇ ದಿನ ಹೋರಾಟದಲ್ಲಿ ಹೋರಾಟಗಾರ ನಂಜಪ್ಪ ಮಾತನಾಡಿ ಕಳೆದ 640 ದಿನಗಳಿಂದ 13 ಹಳ್ಳಿಗಳ ಸಾವಿರ 77 ಎಕರೆ ಪಲವತ್ತಾದ ಕೃಷಿ ಭೂಮಿ ಉಳಿವಿಗಾಗಿ ಸಮಸ್ಯೆ ಬಗ್ಗೆ ಹರಿಯುವವರೆಗೂ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಿ.
ನಾಡಕಚೇರಿ ಉದ್ಘಾಟನೆಗೆ ಮುಂದಾಗಿರುವುದಕ್ಕೆ ರೈತರದ ನಾವು ತೀವ್ರವಾಗಿ ಖಂಡಿಸುತ್ತೇವೆ ಅಂದಿನ ದಿನ ಪ್ರತಿಭಟನೆಗೆ ಮುಂದಾಗುತ್ತೇವೆರೈತ ವಿರೋಧಿ ಯಾದ ಕಳೆದ ಸರ್ಕಾರ ಪತನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳ ಕಳೆದರೂ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಲಕ್ಷಣವಿಲ್ಲ ಅಧಿಕಾರವಿಲ್ಲ ದಾಗ ಹಾಡಿದ ಮಾತುಗಳು ಅಧಿಕಾರಕ್ಕೆ ಬಂದಾಗಮಾತನಾಡದಿರುವುದು ನಮ್ಮಲ್ಲಿ ಆತಂಕ ಮೂಡು ವಂತಾಗಿದೆ 640 ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟಿಸಿದ್ದೇವೆ.
ರೈತರ ಹೋರಾಟವನ್ನು ಬೆಂಬಲಿಸಿ ರಾಜ್ಯ ಮತ್ತು ಮಟದ ನಾಯಕರು ಭಾಗವಹಿಸಿ ಮಂತ್ರಿಗಳು ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ ಹೀಗೆ ನಿರಂತರ ಹೋರಾಟದಿಂದ 18 10 2023 ರಂದು ಮಾನ್ಯ ಕೈಗಾರಿಕಾ ಸಚಿವರ ಎಂಬಿ ಪಾಟೀಲ್ ಹತ್ತು ಉಸ್ತುವಾರಿ ಸಚಿವ ಕೆಎಚ್ ಮುನಿಯಪ್ಪ ಅವರ ನೇತೃತ್ವದಲ್ಲಿ ಸಭೆ ವಿಫಲವಾಗಿದೆ ಮತ್ತೊಂದು ಸಭೆ 10 ದಿನಗಳಲ್ಲಿ ನಡೆಸಿ ರೈತರ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು ಆದರೆ ಇದುವರೆಗೂ ರೈತರ ಕಡೆ ಗಮನಹರಿಸದೆ ಇರುವುದು ರೈತರ ಬಗೆಗಿನ ನಿರ್ಲಕ್ಷ ಎಂದು ಕಾಣುತ್ತಿದೆ ಎಂದರು.
ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ ರೈತರು ತಮ್ಮ ಬಿಡುವಿಲ್ಲದ ಕೃಷಿ ಚಟುವಟಿಕೆಗಳ ನಡುವೆಯೂ 640 ದಿನಗಳಿಂದ ನಡೆಯುತ್ತಿರುವ ಬುಸುವ ದಿನ ಹೋರಾಟ ಒಂದೊಂದು ನಿರ್ಲಕ್ಷಿಸದೆ ಹೋರಾಟ ನಡೆಸುತ್ತಿದೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಮಳೆಗಾಳಿ ಚಳಿ ಬೇಸಿಗೆ ಬಿಸಿಲು ಎನ್ನದೆ ಪ್ರತಿಭಟನೆ ಮಾಡುತ್ತಿರುವುದು ಸರ್ಕಾರಕ್ಕೆ ಕಾಣುತ್ತಿಲ್ಲವೇ ನಾಡಕಚೇರಿ ಉದ್ಘಾಟನೆ ಮಾಡುವುದಕ್ಕೆ ಸಚಿವರು ಬರುತ್ತಾರೆ ಅವರ ಗಮನಕ್ಕೆ ಈ ಹೋರಾಟದ ಬಗ್ಗೆ ರೈತರು ತಿಳಿಸಿದರೆ ಅವರ ಮುಖ್ಯಮಂತ್ರಿಗಳಿಗೆ ರೈತರ ಕಷ್ಟ ಸುಖ ಹೇಳುತ್ತಾರೆ ಆಗಲಾದರೂ ಸಮಸ್ಯೆ ಬಗ್ಗೆ ಅರಿಯಬಹುದು ಎಂಬ ಆಸೆಯಾಗಿದೆ ಎಂದರು.
ನಾಡಕಚೇರಿ ಉಪಚಾರಸಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಉಪ ತಾಸಿಲ್ದಾರ್ ಸುರೇಶ್ ಮಾತನಾಡಿ ಈ ಮನವಿಯನ್ನು ತಾಲೂಕು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ತಲುಪಿಸುತ್ತೇವೆ ಎಂದರುಈ ಸಂದರ್ಭದಲ್ಲಿ ಹೋರಾಟಗಾರರಾದ ಅಶ್ವತಪ್ಪ ಮುಕುಂದ ನಲ್ಲೂರು ಗೋಪಿನಾಥ್ ವೆಂಕಟರಮಣಪ್ಪ ಗೋವಿಂದ್ ರಾಜ್ ಸುಬ್ರಮಣಿ ಹಾಗೂ ರೈತರು ಇನ್ನು ಮುಂತಾದವರು ಹಾಜರಿದ್ದರು.