ಆನೇಕಲ್: ಮದುವೆ ಸಮಾರಂಭಗಳಿಗೆ ರಾಮರಾಜ್ಬಟ್ಟೆಗಳು ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಹೇಳಿದರು.ಅವರು ಚಂದಾಪುರದಲ್ಲಿ ರಾಮರಾಜ್ ನೂತನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು, ಮದುವೆ ಸಮಾರಂಭ ಸೇರಿದಂತೆ ಯಾವುದೇ ಶುಭ ಸಮಾರಂಭಗಳಿಗೆ ರಾಮರಾಜ್ ಬಟ್ಟೆಗಳು ಅತಿ ಹೆಚ್ಚು ಬೇಡಿಕೆ ಹಾಗೂ ಗುಣಮಟ್ಟದ ಬಟ್ಟೆಗಳನ್ನು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ನೀಡುತ್ತಾ ಬಂದಿದೆ.
ಚಂದಾಪುರ ಹಾಗೂ ಆನೇಕಲ್ ಭಾಗದಲ್ಲಿ ಹೊಸದಾಗಿ ಈ ಮಳಿಗೆಯಿಂದ ಹೆಚ್ಚಿನ ಸಹಕಾರ ಈ ಭಾಗದಲ್ಲಿನ ಶುಭ ಸಮಾರಂಭ ಕಾರ್ಯಕ್ರಮಗಳು ಹಾಗೂ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಸಹಕಾರಿ ಆಗಲಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಉತ್ತಮ ಗುಣಮಟ್ಟದ ಬಟ್ಟೆಗಳು ಎಲ್ಲಾ ರೀತಿಯಲ್ಲೂ ಸಹ ಒಂದೇ ಮಳಿಗೆಯಲ್ಲಿ ಸಿಗುವುದು ಅಪರೂಪ ಆದರೆ ರಾಮರಾಜ್ ಸರಿಸಾಟಿ ಇಲ್ಲದ ಗುಣಮಟ್ಟದ ಬಟ್ಟೆಯನ್ನು ತಯಾರು ಮಾಡಿ ಭಾರತದ ಮಾರಾಟ ಮಾಡುತ್ತಿದೆ ಕರ್ನಾಟಕದಲ್ಲಿ 63ನೇ ಮಳಿಗೆಯನ್ನು ತೆರೆಯುವ ಮೂಲಕ ತಮ್ಮ ವ್ಯಾಪಾರ ವಹಿವಾಟವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಮಾತನಾಡಿ, ದೇಶಿಯ ಗುಣಮಟ್ಟದ ಬಟ್ಟೆಗಳಿಗೆ ನಮ್ಮಲ್ಲಿ ಹೆಚ್ಚಿನ ಬೇಡಿಕೆ ಇದೆ ಅದರಲ್ಲೂ ರಾಮರಾಜ್ ತನ್ನದೇ ಆದ ಗುಣಮಟ್ಟ ಹಾಗೂ ಹೊಂದಾಣಿಕೆ ಇಲ್ಲದ ರೀತಿಯಲ್ಲಿ ಬಟ್ಟೆಗಳನ್ನು ಹಲವಾರು ವರ್ಷಗಳಿಂದ ಮಾರಾಟ ಮಾಡುತ್ತಾ ಬಂದಿದೆ ಚಂದಾಪುರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಬಂದು ನೆಲೆಸಿರುವ ಕಾರ್ಮಿಕರು ಸೇರಿದಂತೆ ಕಂಪನಿಗಳು ಕೈಗಾರಿಕಾ ಪ್ರದೇಶಗಳು ಹೆಚ್ಚಾಗಿ ಆಗುತ್ತಿರುವುದರಿಂದ ಈ ಮಳಿಗೆಯ ಸದುಪಯೋಗ ಸ್ಥಳೀಯರಿಗೆ ಹೆಚ್ಚಾಗಿ ಆಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಘಾಟನೆಗೆ ಆಗಮಿಸಿದ ಸ್ಥಳೀಯ ಜನಪ್ರತಿನಿಧಿಗಳನ್ನು ಮಳಿಗೆಯ ವ್ಯವಸ್ಥಾಪಕರು ಸನ್ಮಾನಿಸಿ ಗೌರವಿಸಿದರು.
ಶಾಸಕ ಬಿ ಶಿವಣ್ಣ, ಸಂಸ್ಥಾಪಕ ಅಧ್ಯಕ್ಷ ಕೆ ಆರ್ ನಾಗರಾಜನ್, ವ್ಯವಸ್ಥಾಪಕ ಗಣೇಶ್ ಕರ್ನಾಟಕ ಎ ಜಿ ಎಂ ರಾಜೇಶ್, ರೀಜನಲ್ ಮ್ಯಾನೇಜರ್ ಜೀವನ್, ಸ್ಥಳೀಯ ಜನಪ್ರತಿನಿಧಿಗಳಾದ ನಾಗವೇಣಿ, ಗೋಪಾಲ್ ರೆಡ್ಡಿ, ಬಾಬುರೆಡ್ಡಿ, ಮುನಿತಿಮ್ಮಾ ರೆಡ್ಡಿ, ವಿನಯ್, ರಾಮರಾಜ್ ಮಳಿಗೆಯ ಸಿಬ್ಬಂದಿಗಳಾದ ಪ್ರಸನ್ನ ಹರಿಪ್ರಸಾದ್ ಮತ್ತಿತರರು ಹಾಜರಿದ್ದರು.