ಗೌರಿಬಿದನೂರು: ವಿಜ್ಞಾನಿಗಳ ಕೃಷಿ ಸಂಶೋಧನಾ ಫಲಿತಗಳು ರೈತಾಪಿ ವರ್ಗಕ್ಕೆ ತಲುಪಿದಾಗ ರೈತರು ಉತ್ತಮ ಇಳುವರಿ ಬರುವ ಕೃಷಿಯನ್ನು ಮಾಡಿ ಅವರು ಸಹಾ ಆರ್ಥಿಕವಾಗಿ ಚೈತನ್ಯವಂತರಾಗಲು ಸಾಧ್ಯ ಎಂದು ಜಿ.ಪಂ ಮಾಜೀ ಅಧ್ಯಕ್ಷರಾದ ಹೋಸೂರು ಮಂಜುನಾಥ್ ಅಭಿಪ್ರಾಯ ಪಟ್ಟರು.
ಇವರು ಇಂದು ತಾಲೂಕಿನ ಗದರೆ ಗ್ರಾ.ಪಂ.ಕೆಂಕೆರೆ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ. ಕೆಂಕೆರೆ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಇತರೇ ಕೃಷಿ ಅವಲಂಭಿತ ಸರ್ಕಾರೀ ಇಲಾಖೆಗಳೊಂದಿಗೆ ಏರ್ಪಡಿಸಿದ್ದ ಕೃಷಿ ಪ್ರದ್ಯೂತ-24 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳದ 3 ತಿಂಗಳಿಂದ ಕೃಷಿವಿದ್ಯಾಥಿಗಳು ತಮ್ಮ ವಿಧ್ಯಾ ರ್ಜನೆಯಲ್ಲಿ ಭಾಗವಾಗಿ ಗ್ರಾಮೀಣ ಪ್ರದೇಶದಲ್ಲಿ ಕೃಷಿಅನುಭವವನ್ನು ಪಡೆಯಲು ಕೆಂಕರೆ ಗ್ರಾಮದ ರೈತರೊಂದಿಗೆ ತಮ್ಮ ಕಾರ್ಯಾನುಭವ ವನ್ನು ಹಂಚಿಕೊಂಡು ನಿಮ್ಮ ಅನುಭವವನ್ನು ಅಭ್ಯಾಸ ಮಾಡಿದ್ದಾರೆ. 2023 ರನ್ನು ಅಂತರರಾಷ್ಟ್ರೀಯವಾಗಿ ವಿಶ್ವ ಸಂಸ್ಥೆ ಸಿರಿಧಾನ್ಯಗಳ ವರ್ಷ ಎಂದು ಆಚರಣೆಮಾಡಿದೆ. ಈಗ ನಾವು ಸಿರಿಧಾನ್ಯಗಳಲ್ಲಿ ರಾಗಿಯನ್ನು
ಹೆಚ್ಚು ಬಳಸುತ್ತಿದ್ದೇವೆ. ಮಿಕ್ಕ ಸಾಮೆ, ನವಣೆ, ಬೂದುಲು,ಆರಿಕೆ ಯನ್ನು ಹೆಚ್ಚು ಬೆಳಿಯುವಂತಾಗಬೇಕು.
ಮುಂದಿನ ದಿನಗಳಲ್ಲಿ ಈ ಧಾನ್ಯಗಳಿಗೆ ಹೆಚ್ಚು ಬೇಡಿಕೆ ಇರುತ್ತೆ. ಇಲ್ಲಿ ರೈತಾಪಿ ವರ್ಗ ಈ ವಿಧ್ಯಾಥಿಗಳನ್ನು ತಮ್ಮಮಕ್ಕಳಂತೆ ಭಾವಿಸಿ ತಮ್ಮ ಅನುಭವವನ್ನು ಅವರೊಂದಿಗೆ ಹಂಚುಕೊಂಡಿದ್ದೀರಿ. ಅವರು ನಿಮ್ಮ ಆತಿಥ್ಯವನ್ನು ಎಂದಿಗೂ ಮರಿಯಲಾರರು. ಬೀಜ ಸಂಸ್ಕರಣೆ, ಗ್ರಾಮೀಣ ಬತುಕು, ಮಿಶ್ರಿತ ಬೆಳೆ, ಹನಿನೀರಾವರಿ, ಪುಷ್ಪ ಬೆಳೆಗಳ ಬೇಸಾಯ, ಮುಂತಾದವುಗಳ ಬಗ್ಗೆ ತಿಳಿದುಕೊಂಡಿದ್ದಾರೆ.
ವಿಧ್ಯಾರ್ಥಿಗಳು ಸಹಾ ಅವರ ವಿದ್ಯಾರ್ಜನೆಯನಂತರ ಗ್ರಾಮೀಣ ಪ್ರದೇಶಗಳಲ್ಲಿ ಅವರ ಸೇವೆಯನ್ನು ಮಾಡಬೇಕೆಂದು ಕಿವಿಮಾತನ್ನು ಹೇಳಿದರು.ಮಧ್ಯವರ್ತಿಗಳ ಕಾಟ ವಿಲ್ಲದೇ ರೈತ ತಾನು ಬೆಳದ ಬೆಳೆಗೆ ಬೆಲೆ ನಿಗದಿ ಪಡಿಸುವ ದಿನ ಬರಬೇಕಾಗಿದೆ ಎಂದರು.
ತಾಲೂಕು ರೈತಸಂಘದ ಅಧ್ಯಕ್ಷರಾದ ಲೋಕೇಶ ಗೌಡ ಮಾತನಾಡಿ ರೈತ ಜೀವನ ಅತೀವೃಷ್ಟಿ, ಅನಾವೃಷ್ಟಿ ಯೊಂದಿಗೆ ಚಲ್ಲಾಟ ಆಡುವ ಸ್ಥಿತಿಯಲ್ಲಿದೆ.ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಸೌಲಭ್ಯ ಇಲ್ಲ. ಕಣ್ಣಾಮುಚ್ಚಾಲೆಯ ವಿಧ್ಯುತ್ ನೊಂದೆಗೆ ಇಲ್ಲಿನ ಕೃಷಿ ಸಾಗುತ್ತಿದೆ ಎಂದರು.
ಕಾರ್ಯಕ್ರಮದಲಿ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ ವೆಂಕಟೇಶ್, ಮುಖಂಢ ಬೊಮ್ಮಣ್ಣ, ಗದರೇ ಜಿಪಿ ಅಧ್ಯಕ್ಷರಾದ ಲಕ್ಷ್ಮಿನರಸಮ್ಮ, ವೆಂಕಟರೆಡ್ಡಿ, ಸತೀಶ್, ಚಂದ್ರಪ್ಪ, ಗಂಗದೇವಮ್ಮ, ಗೋಪಾಲಪ್ಪ, ಶಿವಾನಂದರೆಡ್ಡಿ ಮುಂತಾದವರು ಭಾಗವಹಿಸಿದ್ದರು.