ಇಂದು ಪ್ರೊ ಕಬಡ್ಡಿಯ 64ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ ಪರ್ದೀಪ್ ನರ್ವಾಲ್ ಬಿಟ್ಟರೆ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ಸ್ ಪಡೆದವರೆಂದರೆ ಅದು ಮಣಿಂದರ್ ಸಿಂಗ್ ಮತ್ತು ಪವನ್ ಸೆಹ್ರಾವತ್.
ಈ ಇಬ್ಬರು ರೈಡರ್ಗಳ ಕಾಳಗಕ್ಕೆ ಇಂದು ಮುಂಬೈ ಕ್ರೀಡಾಂಗಣ ಸಜ್ಜಾಗಿದೆ.ಈ ಬಾರಿ ಪ್ರೊ ಕಬಡ್ಡಿ ಆರಂಭದಲ್ಲಿ ಟಾಪರ್ ಆಗಿದ್ದ ಬೆಂಗಾಲ್ ವಾರಿಯರ್ಸ್ ಇತ್ತೀಚಿಗೆ ಸತತ ಸೋಲುಗಳಿಂದ ಒಂಬತ್ತನೇ ಸ್ಥಾನಕ್ಕೆ ಇಳಿದಿದೆ. ಇನ್ನು ತೆಲುಗು ಟೈಟನ್ಸ್ ಆಡಿರುವ 10 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದು ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.
ಹಾಗಾಗಿ ಇಂದು ಎರಡು ತಂಡಗಳು ಬೌನ್ಸ್ ಬ್ಯಾಕ್ ಮಾಡಲು ನೋಡುತ್ತಿದ್ದಾರೆ. ಒಟ್ಟಾರೆ ಎರಡು ತಂಡಗಳು ಕಬಡ್ಡಿ ಮನರಂಜನೆಯ ಬಾಯಾರಿಕೆಯನ್ನು ಇಂದು ಪೂರೈಸಲಿದ್ದಾರೆ.