ಬೆಂಗಳೂರು: `ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್’ನ ಉಪಕ್ರಮವಾದ `ಉಜಾಸ್’, ಋತುಚಕ್ರ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ತನ್ನ ಧ್ಯೇಯದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದೆ.
`ಉಜಾಸ್’ ಸ್ಥಾಪಕರಾದ ಶ್ರೀಮತಿ ಅದ್ವೈತ ಬಿರ್ಲಾ ಅವರ ದೃಷ್ಟಿಕೋನದಿಂದ ಮಾರ್ಗದರ್ಶನ ಪಡೆದ ಈ ಉಪಕ್ರಮವು ಕರ್ನಾಟಕ ರಾಜ್ಯದಲ್ಲಿ ಸಕಾರಾತ್ಮಕ ಬದಲಾವಣೆ ಮತ್ತು ಸಬಲೀಕರಣವನ್ನು ತರಲು ಸಜ್ಜಾಗಿದೆ. ಗೌರವಾನ್ವಿತ ಸ್ಥಳೀಯ ಎನ್ಜಿಒ ಪಾಲುದಾರ ಸಂಸ್ಥೆಯಾದ ಆಕ್ಷನ್ ಇನಿಶಿಯೇಟಿವ್ ಫಾರ್ ಡೆವಲಪ್ಮೆಂಟ್ (ಎಐಡಿ) ಸಹಯೋಗದೊಂದಿಗೆ, `ಉಜಾಸ್’ ತನ್ನ ಮೊದಲ ಹಂತದ ಕಾರ್ಯವನ್ನು ಪ್ರಾರಂಭಿಸಿದೆ.
ಸ್ಥಳೀಯ ಶಾಲೆಗಳು, ಅನಾಥಾಶ್ರಮಗಳು ಮತ್ತು ಸರ್ಕಾರಿ ಕಾಲೇಜುಗಳು, ಬಾಲಕಿಯರ ಹಾಸ್ಟೆಲ್ ಮತ್ತು ಸ್ಥಳೀಯ ಸಮುದಾಯಗಳ ಮೂಲಕ ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರನ್ನು ಸಮಗ್ರವಾಗಿ ತಲುಪಲಿದೆ. ಈ ವ್ಯೂಹಾತ್ಮಕ ಸಹಭಾಗಿತ್ವವು ಒಂದು ವರ್ಷದ ಅಭಿಯಾನದ ಆರಂಭವನ್ನು ಸೂಚಿಸುತ್ತದೆ. ಇದು ಕರ್ನಾಟಕದಲ್ಲಿ ಎಐಡಿ ಮೂಲಕ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುವ ಉಜಾಸ್ನ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಒಟ್ಟಾರೆಯಾಗಿ, ಈ ಸಂಸ್ಥೆಗಳು ಸಕ್ರಿಯವಾಗಿ ಜಾಗೃತಿ ಮೂಡಿಸುವ, ಮೌಢ್ಯಗಳನ್ನು ತೊಡೆದುಹಾಕುವ ಹಾಗೂ ಈ ಪ್ರದೇಶದಾದ್ಯಂತ ಋತುಚಕ್ರ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಸಕಾರಾತ್ಮಕ ಚರ್ಚೆಗಳನ್ನು ಬೆಳೆಸುವ ಗುರಿಯನ್ನು ಹೊಂದಿವೆ. ಅಭಿಯಾನದ ಮೊದಲ ಹಂತದಲ್ಲಿ, ಉಜಾಸ್ ತಂಡವು ಋತುಚಕ್ರ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಯ ಬಗ್ಗೆ ವಯಸ್ಸಿಗೆ ಅನುಗುಣವಾದ ಜಾಗೃತಿ ಶಿಬಿರಗಳನ್ನು ನಡೆಸಿತು ಮತ್ತು ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸಿತು.
ಈ ಉಪಕ್ರಮದ ಬಗ್ಗೆ ಮಾತನಾಡಿದ ಉಜಾಸ್ ಸಂಸ್ಥಾಪಕಿ ಅದ್ವೈತ ಬಿರ್ಲಾ, ಅವರು “ಉಜಾಸ್ ಋತುಚಕ್ರ ಆರೋಗ್ಯ ಎಕ್ಸ್ಪ್ರೆಸ್ ಕೇವಲ ವ್ಯಾನ್ ಅಲ್ಲ, ಅದೊಂದು ಬದಲಾವಣೆಯ ಸಂಕೇತವಾಗಿದೆ. ಅಡೆತಡೆಗಳನ್ನು ನಿವಾರಿಸುವುದರ ಜೊತೆಗೆ ಋತುಚಕ್ರ ಆರೋಗ್ಯವನ್ನು ಒಂದು ನಿಷೇಧವಾಗಿ ಅಲ್ಲದೆ, ಒಂದು ಹಕ್ಕಾಗಿ ಹೊಂದಿರುವ ಸಮಾಜವನ್ನು ಬೆಳೆಸುತ್ತದೆ ಎಂದರು.