ಹೈದರಾಬಾದ್: ಹೈದರಾಬಾದ್ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಯನ್ನು ಬೆಂಗಳೂರು ಬುಲ್ಸ್ ಗೆಲುವಿನೊಂದಿಗೆ ಆರಂಭಿ ಸಿದೆ. ಆತಿಥೇಯ ತೆಲುಗು ಟೈಟಾನ್ಸ್ ತವರಲ್ಲೂ ಸೋಲಿನ ಆಟ ಮುಂದು ವರಿಸಿದೆ. ಬುಲ್ಸ್ 42-26 ಅಂಕಗಳಿಂದ ಟೈಟಾನ್ಸ್ಗೆ ಆಘಾತವಿಕ್ಕಿತು.
ಇದು ಬುಲ್ಸ್ ಸಾಧಿಸಿದ 6ನೇ ಜಯವಾದರೆ, ಟೈಟಾನ್ಸ್ ಅನುಭವಿಸಿದ 12ನೇ ಸೋಲು.ಬುಲ್ಸ್ ಪರ ರೈಡರ್ಗಳಾದ ಅಕ್ಷಿತ್ 9, ವಿಕಾಸ್ ಖಂಡೋಲ 6, ಡಿಫೆಂಡರ್ ಸುರ್ಜೀತ್ ಸಿಂಗ್ 7 ಅಂಕ ಗಳಿಸಿದರು. ಟೈಟಾನ್ಸ್ ಪರ ನಾಯಕ ಪವನ್ ಸೆಹ್ರಾವತ್ ಒಬ್ಬರೇ 7 ಅಂಕ ತಂದಿತ್ತರು.
ಪಾಟ್ನಾಗೆ ಜಯ: ಇನ್ನೊಂದು ಪಂದ್ಯದಲ್ಲಿ ಪಾಟ್ನಾ 34-31 ಅಂಕಗ ಳಿಂದ ಯುಪಿ ಯೋಧಾಸ್ ವಿರುದ್ಧ ಮೇಲುಗೈ ಸಾಧಿಸಿತು. ಇದು ಪಾಟ್ನಾಕ್ಕೆ ಒಲಿದ 6ನೇ ಜಯ. ಯೋಧಾಸ್ 10ನೇ ಸೋಲಿನಿಂದ ದಿಕ್ಕೆಟ್ಟಿತು. ರೈಡರ್ಗಳಾದ ಸಚಿನ್ ಮತ್ತು ಮಂಜೀತ್ (ತಲಾ 6 ಅಂಕ) ಪಾಟ್ನಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಯೋಧಾಸ್ ಪರ ಶಿವಂ ಚೌಧರಿ ಪಂದ್ಯದಲ್ಲೇ ಸರ್ವಾಧಿಕ 7 ಅಂಕ ಗಳಿಸಿದರು.