ಬೆಂಗಳೂರು: ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆಯ ಅರಕೆರೆ ಅಂಚೆ ಶ್ರೀ ಕ್ಷೇತ್ರ ಚೊಕ್ಕನಹಳ್ಳಿ ಶ್ರೀ ವಾಗ್ದೇವಿ ಸರಸ್ವತಿ ದಕ್ಷಿಣ ಕಾಳಿಕಾ ದೇವಿ ಬಸಪ್ಪನವರ ಪೀಠದ ವತಿಯಿಂದ ಇಂದು ಆಯೋಜಿಸಲಾಗಿದ್ದ ಶ್ರೀ ದಕ್ಷಿಣ ಕಾಳಿಕಾ ದೇವಿ ಅಮ್ಮನವರ ನೂತನ ದೇವಾಲಯದ ಕಲ್ಲಿನ ಕಟ್ಟಡ ಶಂಕುಸ್ಥಾಪನೆಯನ್ನು ಇಂದು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಇಲ್ಲಿ ನೂತನ ದೇವಾಲಯದ ಭೂಮಿ ಪೂಜೆ ಕಾರ್ಯಕ್ರಮವನ್ನು ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆಯ ಸುದಿನವಾದ ಇಂದು ಎಲೆರಾಂಪುರ ಕುಂಚಟಿಗರ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಡಾ. ಹನುಮಂತನಾಥ ಸ್ವಾಮೀಜಿಯವರ ಅಮೃತ ಹಸ್ತದಿಂದ ಶ್ರೀ ದಕ್ಷಿಣ ಕಾಳಿಕದೇವಿ ಬಸಪ್ಪನವರ…
ಪೀಠದ ಧರ್ಮದರ್ಶಿಗಳಾದ ಶ್ರೀ ಡಾ. ಅರುಣಗುರೂಜಿ ಅವರ ನೇತೃತ್ವದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಇಂದು ಸಂಜೆ ಪತ್ರಿಕೆ ಪ್ರಧಾನ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ.ವೈ. ಪದ್ಮ ನಾಗರಾಜ್, ಅಬಕಾರಿ ಇಲಾಖೆ ಉಪ ಆಯುಕ್ತರಾದ ಡಾ. ಬಿ.ಆರ್ ಹಿರೇಮಠ್, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು, ಲಗ್ಗೆರೆ ಶ್ರೀ ನಾರಾಯಣಸ್ವಾಮಿ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು, ದೊಡ್ಡಬಳ್ಳಾಪುರ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಶಶಿಧರ್, ಸಮಾಜ ಸೇವಕರದ ಶ್ರೀ ಬಲರಾಮ್, ಚೊಕ್ಕನಹಳ್ಳಿ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತ ಸಮೂಹ ಪಾಲ್ಗೊಂಡಿದ್ದರು.
ಶ್ರೀ ದಕ್ಷಿಣ ಕಾಳಿಕಾದೇವಿ ಅಮ್ಮನವರ ದೇವಾಲಯವು ಪುರಾಣ ಪ್ರಸಿದ್ಧವಾಗಿದ್ದು, ಇಲ್ಲಿ ಬೇಡಿಬರುವ ಭಕ್ತರಿಗೆ ಇಷ್ಠಾರ್ಥಗಳನ್ನು ಈಡೇರಿಸುತ್ತಾ ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಅನ್ನದಾಸೋಹ ಸೇವೆ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಉಚಿತ ವಿದ್ಯಾರ್ಥಿನಿಲಯ ಕಲ್ಪಿಸಿಕೊಟ್ಟಿರುವ ಕಲಿಯುಗದ ಕಾಮಧೇನು ಎಂಬ ನಾಮಾಂಕಿತದಿಂದ ಪ್ರಸಿದ್ಧಿಪಡೆದಿದೆ.
ಇಂದು ನೂತನ ದೇವಾಲಯದ ಕಲ್ಲಿನ ಕಟ್ಟಡದ ಶಂಕುಸ್ಥಾಪನೆ ನೆರವೇರಿದ್ದು, ಈ ನೂತನ ಕಟ್ಟಡಕ್ಕೆ ತಮ್ಮ ತನುಮನ ಧನ ಅಥವಾ ವಸ್ತುಗಳ ರೂಪದಲ್ಲಿ ಸಹಾಯ ಮಾಡಬೇಕು ಎಂದು ಪೀಠದ ಅಧ್ಯಕ್ಷರಾದ ಶ್ರೀ ಡಾ. ಅರುಣಗುರೂಜಿ ವಿನಂತಿಸಿದ್ದಾರೆ.