ಕೆ.ಆರ್.ಪುರ: ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ರವರ ಹುಟ್ಟುಹಬ್ಬದ ಪ್ರಯುಕ್ತ ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾವೇರಿನಗರದ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ ಅವರು ಪಾಲ್ಗೊಂಡು ಅಂಗವಿಕಲರಿಗೆ ದಿನಸಿ ಸಾಮಗ್ರಿಗಳು, ಮಹಿಳಾ ಪೌರ ಕಾರ್ಮಿಕರಿಗೆ ಸೀರೆ, ಪುರುಷರಿಗೆ ಬಟ್ಟೆ ಹಾಗೂ ಶಾಲಾ ಮಕ್ಕಳಿಗೆ ಪೆನ್ ಮತ್ತು ಪುಸ್ತಕ ಹಾಗೂ ಸಿಹಿ ವಿತರಿಸಿದರು.
ಇದೇ ವೇಳೆ ಕಾವೇರಿ ನಗರದ ಮಾರಮ್ಮ ಹಾಗೂ ಗಂಗಮ್ಮ ದೇವಾಲಯದಲ್ಲಿ ವಿಶೇಷ ಅಲಂಕಾರ, ಅಭಿಷೇಕ ಮತ್ತು ಪೂಜೆ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷ ಮನೋಹರರೆಡ್ಡಿ,ಕ್ಷೇತ್ರ ಎಸ್.ಸಿ.ಮೋರ್ಚಾ ಉಪಾಧ್ಯಕ್ಷ ಅಂಬರೀಶ್, ಶಕ್ತಿ ಕೇಂದ್ರ ಅಧ್ಯಕ್ಷ ಎನ್.ಕುಮಾರ್, ಮುಖಂಡರಾದ ಮಹಮ್ಮದ್ ನಸ್ರು,ದೀಪಕ್, ಕೆ.ವೆಂಕಟೇಶ್, ಎನ್.ಹರೀಶ್, ರವಿ,ಜಿ.ವೆಂಕಟ್,ಉಮೇಶ್, ಎಸ್.ಮುನಿರಾಜು,ಎನ್.ವೆಂಕಟೇಶ್ ಮತ್ತಿತರರು ಹಾಜರಿದ್ದರು.