ಬೆಂಗಳೂರು: ಅಮರನಾಥ ಗೌಡ ರವರು ಕಳೆದ 23 ವರ್ಷಗಳ ಹಿಂದೆ ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ ಕನ್ನಡ ಸಂಸ್ಥೆಯನ್ನು ಸ್ಥಾಪಿಸಿ ಅನಿವಾಸಿ ಕನ್ನಡಿಗರನ್ನೆಲ್ಲ ಒಟ್ಟಾಗಿ ಸೇರಿಸಿ ಅಕ್ಕ ಸಮ್ಮೇಳನವನ್ನು ಮಾಡುವ ಮೂಲಕ ವಿಶಿಷ್ಟವಾದ ದಾಖಲೆಯನ್ನು ಬರೆದಿದ್ದರು. ಇಂದು ಅಕ್ಕ ಸಮ್ಮೇಳನ ಎಂದರೆ ಒಂದು ಪ್ರತಿಷ್ಠೆಯ ಸಂಕೇತವಾಗಿದೆ.
ಸುಮಾರು 22 ವರ್ಷಗಳಿಂದ ಅಧ್ಯಕ್ಷರಾಗಿ ಮುಂದುವರೆಯುತ್ತಾ ಅಮೇರಿಕಾ ದೇಶದಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರತಿವರ್ಷ ಮೇಳಯಿಸುವಂತೆ ಮಾಡುತ್ತಿರುವ ಅಕ್ಕ ಸಮ್ಮೇಳನಕ್ಕೆ ಕರ್ನಾಟಕ ರಾಜ್ಯದ ಅನೇಕ ಕಲಾವಿದರು ಸಾಹಿತಿಗಳು ಚಲನಚಿತ್ರರಂಗದ ತಾರೆಯರು ಜಾನಪದ ಕಲಾವಿದರು ಗಾಯಕರು. ಪ್ರತಿಷ್ಠಿತ ಗಣ್ಯರು ಭಾಗವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಆಯೋಜಿಸಿ ಮುನ್ನಡೆಸುತ್ತಿರುವ ವಿಶ್ವ ಕನ್ನಡ ಹಬ್ಬ 2.. ಪ್ರಸ್ತುತ ಕೆಲವೇ ತಿಂಗಳುಗಳಲ್ಲಿ ಸಿಂಗಾಪುರ್ ಮಹಾ ದೇಶದಲ್ಲಿ ನಡೆಯಲಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಕೇಂದ್ರ ಕಚೇರಿಗೆ ಆಗಮಿಸಿದ ಡಾ. ಅಮರನಾಥ ಗೌಡರವರು ಕರ್ನಾಟಕ ಡಾ.ಶಿವಕುಮಾರ ನಾಗರನವಿಲೆ ಅವರೊಂದಿಗೆ ಮಾತನಾಡುತ್ತಾ.
ವಿಶ್ವ ಕನ್ನಡ ಹಬ್ಬದ ಪರಿಕಲ್ಪನೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಎರಡನೇ ವಿಶ್ವಕನ್ನಡ ಹಬ್ಬಕ್ಕೆ ಶುಭಾಶಯಗಳನ್ನು ಕೋರಿದರು.ಅಂತರ ರಾಷ್ಟ್ರೀಯ ಮಟ್ಟದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲು ಮೂಲತಃ ಇಚ್ಛಾ ಶಕ್ತಿ ಬೇಕು, ದೃಢ ಸಂಕಲ್ಪ ಇರಬೇಕು, ಕನ್ನಡದ ಬಗ್ಗೆ ಅಪಾರವಾದ ಗೌರವ ಇರಬೇಕು, ಏನೇ ಬಂದರೂ ಅದನ್ನು ಸಹಿಸುವ ಸಹಿಷ್ಣುವಾದ ಗುಣ ಇರಬೇಕು, ಎಲ್ಲರನ್ನು ಒಟ್ಟಾಗಿ ಕೊಂಡ್ಯೋಯುವ ಮನೋಭಾವ ಇರಬೇಕು,
ಆ ಎಲ್ಲಾ ಅಂಶಗಳು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಲ್ಲಿ ಇರುವ ಕಾರಣದಿಂದ ಅತ್ಯಂತ ವಿಜೃಂಭಣೆಯ ಕಾರ್ಯಕ್ರಮವನ್ನು ದುಬೈನಲ್ಲಿ ನಡೆಸಲಾಗಿದೆ ಎರಡನೇ ವಿಶ್ವಕನ್ನಡ ಹಬ್ಬದ ಕಾರ್ಯಕ್ರಮಕ್ಕೆ ನಮಗೂ ಸಹ ಪ್ರೀತಿಯ ಆಮಂತ್ರಣವನ್ನು ನೀಡಿರುವ ಹಿನ್ನೆಲೆಯಲ್ಲಿ ಬಹಳ ಸಂತೋಷವಾಗಿದೆ ಮತ್ತು ಈ ಕಾರ್ಯಕ್ರಮಕ್ಕೆ ಅತ್ಯಂತ ತುಂಬು ಹೃದಯದಿಂದ ಅಭಿನಂದನೆಗಳನ್ನು ತಿಳಿಸುತ್ತಾ ಶುಭಾಶಯಗಳನ್ನು ಕೋರುತ್ತೇನೆ ಎಂದು ಆತ್ಮೀಯವಾಗಿ ನುಡಿದರು. ಮತ್ತು ನಾಡಿನ ಅನೇಕ ಪ್ರತಿಷ್ಠಿತ ವ್ಯಕ್ತಿಗಳು, ಸಾಧಕರು ಮತ್ತು ಸರ್ಕಾರ ಈ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಬೆಂಬಲವನ್ನು ನೀಡಬೇಕೆಂದು ಅವರು ವಿನಂತಿ ಮಾಡಿಕೊಂಡರು.