ಕುಣಿಗಲ್: ಬೃಹತ್ ಉದ್ಯೋಗ ಮೇಳವನ್ನು ಬ ಫೆ. 17 ರಂದು ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಸದಸ್ಯ ನಾರಾಯಣ್ ತಿಳಿಸಿದರು.
ಪಟ್ಟಣದ ಲೋಕಸಭಾ ಸದಸ್ಯರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಸಂಸತ್ ಸದಸ್ಯ ಡಿ ಕೆ ಸುರೇಶ್ ಹಾಗೂ ಶಾಸಕ ಡಾಕ್ಟರ್ ಎಚ್ ಡಿ ರಂಗನಾಥ್ ಇವರ ನೇತೃತ್ವದಲ್ಲಿ ಕುಣಿಗಲ್ ಪಟ್ಟಣದಲ್ಲಿ ಬರುವ ಫೆ. 17 ರಂದು ಬೆಳಿಗ್ಗೆ 9 ರಿಂದ ಸಂಜೆ 5:00 ವರೆಗೆ ಶನಿವಾರ ಪಟ್ಟಣದ ಜಿ ಕೆ ಬಿ ಎಮ್ ಎಸ್ ಶಾಲಾ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು,
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ಮತ್ತು ಅಂಗವಿಕಲರಿಗೆ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದ ರಾಜ್ಯದ ಪ್ರತಿಷ್ಠಿತ ಖಾಸಗಿ ಕಂಪನಿಗಳ ಸಹಕಾರದೊಂದಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು ಈ ಉದ್ಯೋಗ ಮೇಳದಲ್ಲಿ 85 ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಅರೆ ಸರ್ಕಾರಿ ತರಬೇತಿ ಸಂಘ ಸಂಸ್ಥೆಗಳು ಭಾಗವಹಿಸಲಿರುವುದರಿಂದ ಉದ್ಯೋಗಿ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಉದ್ಯೋಗ ಅವಕಾಶವನ್ನ ಪಡೆಯುವಂತಾಗಬೇಕು ಎಂದರು.
ಸುಮಾರು 5000ಕ್ಕೂ ಹೆಚ್ಚು ಉದ್ಯೋಗ ಅವಕಾಶಗಳಿರುವುದರಿಂದ ಆಯ್ಕೆ ಹೊಂದಿದ ಅಭ್ಯರ್ಥಿಗಳಿಗೆ ಸ್ಥಳದಲ್ಲಿ ನೇಮಕಾತಿ ಪತ್ರವನ್ನು ನೀಡಲಾಗುವುದು ಅಭ್ಯರ್ಥಿಗಳು ಎಂಟನೇ ತರಗತಿ,ಎಸ್ ಎಸ್ ಎಲ್ ಸಿ, ಪಿಯುಸಿ, ಜೆ ಓ ಸಿ, ಐ ಟಿ ಐ, ಡಿಪ್ಲೋಮೋ, ಬಿಎ, ಬಿಕಾಂ, ಬಿ ಎಸ್ ಸಿ, ಬಿಬಿಎಂ,ಬಿಸಿಎ,ಬಿ ಇ, ಎಂಬಿಎ,ಎಂಕಾಂ,ಎಂ ಎಸ್ ಸಿ, ಎಂ ಎ ಪದವಿ ನರ್ಸಿಂಗ್ ಸೇರಿದಂತೆ ಎಲ್ಲಾ ರೀತಿಯ ಪದವಿ ಹೊಂದಿರುವ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಬಹುದು ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ಅಂಕಪಟ್ಟಿಗಳೊಂದಿಗೆ ಕನಿಷ್ಠ 10 ಸೆಟ್ ಕಾಪಿಗಳನ್ನ ಬಯೋಡೇಟಾ ಪರಿಚಯದ ಜೆರಾಕ್ಸ್ ಪ್ರತಿಗಳನ್ನು ತಂದಿರಬೇಕು ವಯೋಮಿತಿ 18 ರಿಂದ 33 ವರ್ಷಗಳಾಗಿದ್ದು ರಾಜ್ಯದ ತುಮಕೂರು ಬೆಂಗಳೂರು ಮೈಸೂರು ಜಿಲ್ಲೆಗಳ ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9353249928. 9740330797 ಹಾಗೂ 9071206954 ಸಂಪರ್ಕಿಸಲು ಕೋರಿರುತ್ತಾರೆ.
ಕುಣಿಗಲ್ ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷಶಂಕರ್ ಮಾತನಾಡಿ ತಾಲೂಕಿನ ನಿರುದ್ಯೋಗಿ ಯುವಕ ಯುವಕರು ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮೂಲಕ ಸಂಸದರು ಹಾಗೂ ಶಾಸಕರು ಕ್ಷೇತ್ರದ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಇಂತಹ ಬೃಹತ್ ಉದ್ಯೋಗ ಮೇಳ ಆಯೋಜಿಸಿರುವುದನ್ನ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.ಕಾರ್ಯಕ್ರಮದ ಸಂಘಟಕ ಕುಮಾರ್ ಉಪ್ಪಾರ್, ಮಾಜಿ ಪುರಸಭಾ ಅಧ್ಯಕ್ಷ ರಹಮಾನ್ ಶರೀಫ್. ಹೌಸಿಂಗ್ ಬೋರ್ಡ್ ಪಾಪಣ್ಣ. ಚಂದ್ರಶೇಖರ್ ಗ್ಯಾಸ್ ಮೂರ್ತಿ ಏಜಾಜ್ ಪಾಷಾ. ಲೋಕೇಶ್, ಉಜ್ಜಿನಿ ನಾಗೇಶ್ ಉಪಸ್ಥಿತರಿದ್ದರು.