ಬೆಂಗಳೂರು: ವಿಕಸಿತ ಭಾರತ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಿ ಸ್ವಾಮ್ಯದ ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಬೆಂಗಳೂರು, ಮೈಸೂರು ಮಂಗಳೂರು ಶಾಖೆಯಿಂದ ನಗರದಲ್ಲಿಂದು ಎರಡು ದಿನಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.
ನಗರದ ಕ್ಯಾಪಿಟಲ್ ಹೋಟೆಲ್ ನಲ್ಲಿ ಆಯೋಜಿಸಲಾದ ಕರ್ನಾಟಕ ಸಿಎಂಎ ವಾರ್ಷಿಕ ಸಮ್ಮೇಳನ 2024 ದಲ್ಲಿ ಸೆಂಟ್ರಲ್ ಟ್ಯಾಕ್ಸ್ ಆಡಿಟ್ – 1 ವಿಭಾಗದ ಆಯುಕ್ತ ಎಂ.ವಿ. ಬದ್ರಿ ಪ್ರಸಾದ್ ಸಮ್ಮೇಳನ ಉದ್ಘಾಟಿಸಿದರು.
ಐಸಿಎಂಎಐ ಮಾಜಿ ಅಧ್ಯಕ್ಷ ಜಿ.ಎನ್. ವೆಂಟರಾಮನ್ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ವಿಕಸಿತ ಭಾರತ ನಿರ್ಮಾಣಕ್ಕಾಗಿ ಉತ್ಪಾದನೆ. ತಂತ್ರಜ್ಞಾನ, ನಾವೀನ್ಯತೆ, ಜಾಗತಿಕ ಆರ್ಥಿಕ ಪರಿಸ್ಥಿತಿ, ಭಾರತೀಯ ನಾಯಕತ್ವದ ಯಶೋಗಾಥೆ, ಕೃಷಿ ಮತ್ತು ವಿಮಾನಯಾನ, ಸುಸ್ಥಿರ ಅಭಿವೃದ್ಧಿ ಕುರಿತಾದ ಗೋಷ್ಠಿಗಳು ನಡೆದವು.
ದಿ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮತ್ತು ಸಾಗರ್ ಆಸ್ಪತ್ರೆಗಳ ಸಮೂಹದೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ಬಿ. ದೇವರಾಜುಲು, ಮೈಸೂರು ಅಧ್ಯಕ್ಷ ಟಿ. ಆರ್. ತ್ರಿನೇಶ್, ಬೆಂಗಳೂರು ಚಾಪ್ಟರ್ ಕಾರ್ಯದರ್ಶಿ ಅಭಿಜಿತ್ ಎಸ್ ಜೈನ್, ದಕ್ಷಿಣ ಭಾರತದ ಪ್ರಾದೇಶಿಕ ವಿಭಾಗದ ಖಜಾಂಚಿ ಗಿರೀಶ್ ಕೆ, ಕೇಂದ್ರೀಯ ಮಂಡಳಿಯ ಸದಸ್ಯ ಸಿ.ಎಂ.ಎ ಸುರೇಶ್ ಆರ್ ಗುಂಜಲ್ಲಿ ಮತ್ತಿತರರು ಉಪಸ್ಥಿತರಿದ್ದರು.