ಚಿತ್ರದುರ್ಗ: ತರಳಬಾಳು ಜಗದ್ಗುರುಗಳಾದ ಪರಮ ಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸಿರಿಗೆರೆಯಲ್ಲಿ ನಡೆಯುತ್ತಿ ರುವ ತರಳ ಬಾಳು ಹುಣ್ಣಿಮೆ ಮಹೋತ್ಸವ ಕಾರ್ಯ ಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗ ವಹಿಸಿ ಮಾತ ನಾಡಿದರು.
ಬಸವಾದಿ ಶರಣರ ಸಾಮಾಜಿಕ ಕ್ರಾಂತಿಯ ಹಾದಿ ಯಲ್ಲಿಯೇ ಸಿರಿಗೆರೆಯಲ್ಲಿ ವಿಶ್ವಬಂಧು ಗೌರವ ಪಡೆದ ಮರುಳ ಸಿದ್ಧರಂತಹ ಪುಣ್ಯ ಪುರುಷರು ಬೆಳಗಿದ ಜ್ಯೋತಿ ಇಂದು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಮೂಲಕ ಪ್ರಜ್ವಲಿಸಿ ಲಕ್ಷಾಂತರ ಭಕ್ತರು ಹಾಗೂ ವಿದ್ಯಾರ್ಥಿಗಳಿಗೆ ಬದುಕಿನ ಮಾರ್ಗ ತೋರಿಕೊಡುತ್ತಿದೆ.
ಅದು ಸಿರಿಗೆರೆ ಬೃಹನ್ಮಠದ ಆಧ್ಯಾತ್ಮಿಕ ಶಕ್ತಿ. ಸ್ವತಃ ಮಹಾನ್ ವಿದ್ವತ್ ಸಾಧನೆ ಮಾಡಿರುವ ಪೂಜ್ಯ ಶ್ರೀ ಗಳು ಸಮ ಸಮಾಜವನ್ನು ಕಟ್ಟಲು ತ್ರಿವಿಧ ದಾಸೋಹ ಕ್ರಾಂತಿಯ ಜೊತೆಗೆ ಕೈಗೊಂಡಿರುವ ಜಲಕ್ರಾಂತಿ ಯಂತಹ ಮಹತ್ ಕಾರ್ಯಗಳನ್ನು ಮಾಡುತಿದ್ದರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ,ಶಾಸಕರಾದ ಎಂ.ಚಂದ್ರಪ್ಪ, ಬಿ.ಪಿ ಹರೀಶ್, ಒಐಅ ನವೀನ್, ಹಿರಿಯ ಮುಖಂಡ ರಾದ ಬಸವರಾಜಪ್ಪನವರು ಸಮಾಜದ ಮುಖಂಡರು ಉಪಸ್ಥಿತರಿದ್ದರು.