ಬೇಲೂರು: ಮಾನವ ಜೀವನದಲ್ಲಿ ಉನ್ನತ ಗುರಿ ಮತ್ತುಧ್ಯೇಯ, ಸತ್ಯ ಧರ್ಮದ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಳ್ಳಬೇಕು. ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದಲ್ಲ,ಎಂದು ರಂಭಾಪುರಿ ಜಗದ್ಗುರು ಶ್ರೀ ಶ್ರೀ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ತಾರಿಮರ ಸಮೀಪದ ಚಂದನಹಳ್ಳಿ ಗ್ರಾಮದ ಶ್ರೀ ಕಲ್ಲೇಶ್ವರ ದೇಗುಲದ ಲೋಕಾರ್ಪಣೆ ಧಾರ್ಮಿಕ ಸಮಾರಂಭದಲ್ಲಿ ದಿವ್ಯ ಸಾನಿದ್ಯವನ್ನು ವಹಿಸಿ ಮಾತನಾಡಿದ ಅವರುಅಧುನಿಕ ಜಗದಲ್ಲಿ ಮನುಷ್ಯ ಯಂತ್ರದಂತೆ ದುಡಿದರೂ ಜೀವನದಲ್ಲಿ ಶಾಂತಿ ಸಮಾಧಾನಗಳಿಲ್ಲ, ಮನುಷ್ಯನಿಗೆ ಸಂಪತ್ತು ಅಷ್ಟೇ ಮುಖ್ಯವಲ್ಲ, ಅದರೊಂದಿಗೆ ಒಂದಿಷ್ಟಾದರೂ ಆಧ್ಯಾತ್ಮ ಚಿಂತನದ ಅವಶ್ಯಕತೆಯಿದೆ.
ಬೆಳೆಯುವ ಯುವ ಜನಾಂಗದಲ್ಲಿ ಎಷ್ಟು ವೈಚಾರಿಕ ಮನೋಭಾವ ಬೆಳೆದು ಬರಲಿ ಆದರೆ ನಾಸ್ತಿಕ ಮನೋಪ್ರವೃತ್ತಿ ಬೆಳೆಯಬಾರದು. ಸಂಪತ್ತು ಬಂದಾಗ ಸಂಬಂಧಗಳು ದೂರವಾಗಬಾರದು. ಹರಿಯುವ ನೀರಿಗೆ ಮತ್ತು ಪ್ರಜ್ವಲಿಸುವ ಸೂರ್ಯನಿಗೂ ಒಂದು ಧರ್ಮವಿದೆ. ದೀಪ ತನಗಾಗಿ ಉರಿಯುವುದಿಲ್ಲ, ಇನ್ನೊಬ್ಬರಿಗೆ ದಾರಿಗೆ ಬೆಳಕು ತೊರುವಂತೆ ಶ್ರೀ ಗರು ಅಜ್ಞಾನ ದೂರ ಮಾಡಿ ಉಜ್ವಲ ಬದುಕಿಗೆ ಬೆಳಕು ತೋರುತ್ತಾನೆ ಹಾಗೇಯೆ ನಮ್ಮ ಬದುಕು ಹಸನಾಗಬೇಕಿದೆ.ಭೌತಿಕ ಬದುಕಿಗೆ ಆದರ್ಶಗಳು ದಾರಿದೀಪ, ಭೌತಿಕ ಜೀವನ ಸಮೃದ್ಧಗೊಂಡಂತೆ ಅಂತರಿಕ ಜೀವನ ಸಮೃದ್ಧಗೊಳ್ಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ಭೋಧಿಸಿದ್ದಾರೆ.
ಚಂದನಹಳ್ಳಿ ಗ್ರಾಮದಲ್ಲಿನ ನೂತನ ದೇಗುಲ ಲೋಕಾರ್ಪಣೆ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಅರ್ಥಪೂರ್ಣವಾಗಿದೆ ಎಂದರು.
ಸಮಾರಂಭವನ್ನು ಉದ್ಘಾಟನೆ ನಡೆಸಿ ಮಾತನಾಡಿದ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಕ್ವಲ್ರೇವಣ್ಣ, ಭಾರತೀಯ ಆಧ್ಯಾತ್ಮ ಸಂಪತ್ತು ಬೆಟ್ಟದಷ್ಟಿದೆ. ಪೂರ್ವದ ಋಷಿ ಮುನಿಗಳು ಕೊಟ್ಟ ಆಧ್ಯಾತ್ಮಿಕ ಮೌಲ್ಯಗಳು ನಮ್ಮೆಲ್ಲರ ಬಾಳಿಗೆ ಬಹು ದೊಡ್ಡ ಶಕ್ತಿ ಕೊಟ್ಟಿವೆ. ಮಾಣವ ಧರ್ಮಕ್ಕೆ ಜಯವಾಗಲಿ ಎಮಬ ವಿಶ್ವಬಂಧುತ್ವದ ಸಂದೇಶ ಸಾರಿದ ಜಗದ್ಗುರು ರಂಭಾಪುರಿ ಪೀಠ ಪ್ರಸಕ್ತ ದಿನದಲ್ಲಿ ಸರ್ವಜನಾಂಗದ ತೋಟವಾಗಿ ಧರ್ಮ ಮಾರ್ಗದಲ್ಲಿ ಮೊದಲ ಸ್ಥಾನದಲ್ಲಿದೆ.
ಆದರ್ಶದ ಬದುಕನ್ನು ನಡೆಸಲು ಸರ್ವರಿಗೂ ರಂಭಾಪುರಿ ಜಗದ್ಗುರುಗಳ ನೀಡಿದ ಸಂದೇಶವನ್ನು ಪಾಲಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ,ಪ್ರಸಕ್ತ ದಿನಮಾನದಲ್ಲಿನ ಯುವಕರು ದಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಬದುಕನ್ನು ನಾಶ ಮಾಡಿಕೊಳ್ಳಿತ್ತಿದ್ದಾರೆ. ಅವರಿಗೆ ಧರ್ಮ ಮಾರ್ಗವನ್ನು ತೋರುವ ಕೆಲಸವನ್ನು ಪೋಷಕರು ಮಾಡಬೇಕಿದೆ. ವಿಶೇಷವಾಗಿ ಬೇಲೂರಿನಲ್ಲಿ ನಡೆದ ದಸರಾ ಸಮ್ಮೇಳನ ಐತಿಹಾಸಿಕ ದಾಖಲೆಯನ್ನು ರಂಭಾಪುರಿ ಜಗದ್ಗುರುಗಳಿಂದ ನಿರ್ಮಿಸದ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಗಳು ಮತ್ತು ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಧರ್ಮ ಸಂಸ್ಕೃತಿ ಬಗ್ಗೆ ಉಪದೇಶಾಮೃತ ನೀಡಿದರು. ಉದ್ಯಮಿ ಗ್ರಾನೈಟ್ ರಾಜಶೇಖರ್, ಅದ್ದೂರಿ ಚೇತನ್ ಕುಮಾರ್,ಬಲ್ಲೇನಹಳ್ಳಿ ಗೆಂಡೇಹಳ್ಳಿ ಚೇತನ್, ಅನ್ನಪೂರ್ಣಚಂದ್ರಶೇಖರ್, ಅರೇಹಳ್ಳಿ ನಟೆರಾಜ್, ಜಯಮೂರ್ತಿ, ಪತ್ರಕರ್ತ ಹೆಬ್ಬಾಳು ಹಾಲಪ್ಪ, ಶಿವಪ್ಪ ಇನ್ನು ಮುಂತಾದವರು ಹಾಜರಿದ್ದ ಕಾರ್ಯಕ್ರಮದ ನಿರೂಪಣೆಯನ್ನು ತಾರಿಮರ ಶಾಲೆ ಶಿಕ್ಷಕಿ ನಳಿನಾಕ್ಷಿ ನಡೆಸಿಕೊಟ್ಟರು.