ಕನಕಪುರ: ರಾಮನಗರ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕನಕಪುರ ತಾಲ್ಲೂಕಿನ ಕೆ. ವಿ. ನಾಗನಂದ್ ರವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎನ್. ಎಸ್. ನಡಹಳ್ಳಿ ರವರ ಸೂಚನೆ ಮೇರೆಗೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿಗಳಾದ ರುದ್ರೇಶ್ ರವರ ಸಲಹೆ ಮೇರೆಗೆ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಿ.ಪಿ ಪ್ರಕಾಶ್ ಕನಕಪುರ ತಾಲ್ಲೂಕಿನ ನಗರ ಮಂಡಲದ ಮಾಜಿ ಅಧ್ಯಕ್ಷ ಕೆ.ವಿ.ನಾಗನಂದ್ ರವರನ್ನು ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಪಕ್ಷ ನನ್ನನ್ನು ಗುರುತಿಸಿ ಈ ನಾಡಿನ ಅನ್ನದಾತರಾದ ರೈತರ ಬದುಕಿಗೆ ನೆರವಾಗುವಂತಹ ಕೆಲಸಕ್ಕೆ ನಿಯುಕ್ತಿ ಗೊಳಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ರೈತ ಮೋರ್ಚಾ ರಾಜ್ಯಾಧ್ಯಕ್ಷ ನಡಹಳ್ಳಿ ಹಾಗೂ ಯುವ ನಾಯಕ ರುದ್ರೇಶ್ ರವರಿಗೆ ಅಭಾರಿಯಾಗಿರುವುದಾಗಿ ನಾಗನಂದ್ ತಿಳಿಸಿದ್ದಾರೆ.