ತಿಪಟೂರು: ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಜಕ್ಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಿ, ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತು.
ತಿಪಟೂರಿನ ಟೈಮ್ಸ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಬಿ. ಪ್ರದೀಪ್ ಮಾತನಾಡಿ,ಮಕ್ಕಳಿಗೆ ವೈಜ್ಞಾನಿಕ ಅರಿವು ಬಹು ಮುಖ್ಯವಾದದ್ದು.ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ,ತಂತ್ರಜ್ಞಾನ ಅರಿವು ಇದ್ದವರು ಮಾತ್ರ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ ಮಕ್ಕಳಿಗೆ ವೈಜ್ಞಾನಿಕ ಮತ್ತು ಜ್ಞಾನದ ಅರಿವು ಬಹಳ ಮುಖ್ಯ.
ವಿದ್ಯಾಭ್ಯಾಸ ವಿಜ್ಞಾನದ ಬಗೆಗಿನ ಅರಿವನ್ನು ಮೂಡಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ನರಸಿಂಹಮೂರ್ತಿ,ಸಿ ಆರ್ ಪಿ ಸರಸ್ವತಿ,ಮುಖ್ಯ ಶಿಕ್ಷಕಿ ಪುಷ್ಪವತಿ,ಸಹಶಿಕ್ಷಕರಾದ ಶಿವಕುಮಾರ್, ರಾಜಶ್ರೀ, ಸುಧಾ ಮತ್ತು ಟೈಮ್ಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಯೋಗಿಶ್ ಸೇರಿದಂತೆ ಶಾಲಾ ಎಸ್ಟಿಎಂಸಿ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.