ಬೆಂಗಳೂರು: ಆರ್ವಿ ವಿಶ್ವವಿದ್ಯಾನಿಲಯದ ಎರಡನೇ ವರ್ಷದ ಬಿ.ಡಿಇಸ್ ವಿದ್ಯಾರ್ಥಿನಿ ವರ್ಷಾ ಶ್ರೀನಿವಾಸ ಎನ್ಸಿಸಿ ಗಣರಾಜ್ಯೋತ್ಸವ 2024 ರ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಮೊದಲ ತಂಡದಲ್ಲಿಯೇ ಆಯ್ಕೆಯಾಗಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ಕೆಡೆಟ್ ವರ್ಷಾ ಅವರು 450 ಸಂಸ್ಥೆಗಳು ಮತ್ತು 628 ಶಾಲೆಗಳ ಕೆಡೆಟ್ಗಳೊಂದಿಗೆ ಕಠಿಣ ಸುತ್ತಿನ ಸ್ಪರ್ಧೆಯನಂತರ ಆಯ್ಕೆಗೊಂ
ಡಿದ್ದು, ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಅಡಿಯಲ್ಲಿ 6 ಗ್ರೂಪ್ ಹೆಡ್ಕ್ವಾರ್ಟರ್ಸ್ನಿಂದ 56 ಪ್ರಮುಖ/ಮೈನರ್ ಘಟಕಗಳನ್ನು ಪ್ರತಿನಿಧಿಸಿದ್ದರು.
ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿದ ಆರ್ವಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ .(ಡಾ.) ವೈ.ಎಸ್.ಆರ್. ಮೂರ್ತಿ ಮಾತನಾಡಿ, ಗಣರಾಜ್ಯೋತ್ಸವ ಶಿಬಿರದಲ್ಲಿ ವರ್ಷಾ ಶ್ರೀನಿವಾಸ ಅವರಅದ್ಭುತ ಯಶಸ್ಸು ನಿಜವಾಗಿಯೂ ಆರ್ವಿ ವಿಶ್ವವಿದ್ಯಾ
ಲಯದ ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಆಕೆಯ ಸಾಧನೆಯ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ವರ್ಷಾ ಅವರಿಗೆ ಅಭಿನಂದನೆಗಳು ಎಂದರು.
ನಮ್ಮ NCC 3/3 ಕೋಯ್ಗೆ ಇದು ಅಸಾಧಾರಣ ವರ್ಷವಾಗಿದೆ. ಎನ್ಸಿಸಿ ನಿರ್ದೇಶನಾಲಯವನ್ನು ಪ್ರತಿನಿಧಿಸುವುದು ಮತ್ತು ದೆಹಲಿಯಲ್ಲಿ ಕರ್ತವ್ಯಪಥದಲ್ಲಿ ಭಾಗಿಯಾಗುವುದು ಯಾವುದೇ ಎನ್ಸಿಸಿ ಕೆಡೆಟ್ನ ಕನಸು. ಕೆಡೆಟ್ ವರ್ಷಾ ಅವರ ಸಾಧನೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ ಎಂದು ಆರ್ವಿ ವಿಶ್ವವಿದ್ಯಾಲಯದ ಎನ್ಸಿಸಿ 3/3 ಕಾಯ್ನ ಉಸ್ತುವಾರಿ ಅಧಿಕಾರಿ ಡಾ.ಭಾನು ಪ್ರಕಾಶ್ ನುನ್ನಾ ಹೇಳಿದರು.