ಹಾವೇರಿ : ಮನೆಯ ಮುಂದೆ ಆಟವಾಡುವಾಗ ಬಕೆಟ್ನಲ್ಲಿ ತಲೆಕೆಳಗಾಗಿ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಹಾವೇರಿಯ ಶಿವಬಸವ ನಗರದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ದಕ್ಷಿತ್ ಯಳಂಬಳ್ಳಿ ಮಠ (೧) ಸಾವನ್ನಪ್ಪಿರುವ ದುರ್ದೈವಿ ಮಗು. ಕೂಡಲೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿ ಆಗದೆ ಮಗು ಕೊನೆಯುಸಿರೆಳೆದಿದೆ. ಘಟನೆ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



