ದೊಡ್ಡಬಳ್ಳಾಪುರ: ಹಾರ್ಮೋನ್, ರಕ್ತನಾಳಗಳಲ್ಲಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ತರಹದ ನಿಖರ ರೋಗ ಪತ್ತೆ ಹಚ್ಚುವ 32 ಸ್ಲೈಸ್ ಸಿಟಿ ಸ್ಕ್ಯಾನ್ ಸೌಲಭ್ಯ ಇನ್ನು ಮುಂದೆ ನಗರದಲ್ಲಿ ಸಿಗಲಿದೆ.ನಗರದ ಡಿ-ಕ್ರಾಸ್ ರಸ್ತೆಯ ಐಸಿಐಸಿಐ ಬ್ಯಾಂಕ್ ಸಮೀಪ ಬುಧವಾರ ನೂತನವಾಗಿ ಪ್ರಾರಂಭವಾದ ಧನ್ವಂತರಿ ಹೆಲ್ತ್ ಸರ್ವೀಸಸ್ ಅಂಗಸಂಸ್ಥೆಯಾದ ಶ್ರೇಷ್ಠ ಡಯಾಗ್ನೋಸ್ಟಿಕ್ ಸಂಸ್ಥೆಯಲ್ಲಿ ಅತ್ಯಾಧುನಿಕ ಸ್ಕ್ಯಾನಿಂಗ್, ಚಿಕಿತ್ಸಾ ವಿಧಾನ ಲಭ್ಯವಾಗಲಿದೆ.
ಬಡವರು, ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ 2ಆ, 3ಆ ಹಾಗೂ 4ಆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆ, ಕಲರ್ ಡಾಪ್ಲರ್, 2ಆ ಎಕೋ, ಸಿಟಿಸ್ಕ್ಯಾನ್, ಎಂಆರ್ ಐ, ಯುಎಸ್ ಜಿ, ಸಿಟಿ ಮಾರ್ಗದರ್ಶಿ ಕಾರ್ಯವಿಧಾನ, ಎಕ್ಸ್ ರೇ, ರೇಡಿಯೋಗ್ರಾಫಿ ಹಾಗೂ ಸ್ವಯಂ ಚಾಲಿತ ಪ್ರಯೋಗಾಲಯದ ಸೇವೆ ಸಿಗಲಿದೆ.
ಕ್ಲಿಷ್ಟಕರ ರೋಗಪತ್ತೆ ವಿಧಾನಗಳಿಗಾಗಿ ಸಾರ್ವಜನಿಕರು ಬೆಂಗಳೂರಿಗೆ ಅಲೆಯಬೇಕಿತ್ತು, ಆದರೆ, ದೊಡ್ಡಬಳ್ಳಾಪುರದಲ್ಲಿ ಇದೇ ಪ್ರಪ್ರಥಮ ಬಾರಿಗೆ 2ಆ ಅಲ್ಟ್ರಾ ಸೌಂಡ್ ಯಂತ್ರ ಒಳಗೊಂಡ ಡಯಾಗ್ನೋಸ್ಟಿಕ್ ಸೇವೆಯನ್ನು ನಮ್ಮ ಶ್ರೇಷ್ಠ ಡಯಾಗ್ನೋಸ್ಟಿಕ್ ಸಂಸ್ಥೆ ಒದಗಿಸಲಿದೆ. ಇದರ ಜೊತೆಗೆ 32 ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ 300 ಕ್ಷ-ಕಿರಣ ಯಂತ್ರ ಹಾಗೂ ರಕ್ತ, ಹಾರ್ಮೋನುಗಳ ಅಧ್ಯಯನ ನಡೆಸುವ ಸ್ವಯಂ ಚಾಲಿತ ಲ್ಯಾಬ್ ವ್ಯವಸ್ಥೆ ನಗರದಲ್ಲಿ ಪರಿಚಯಿಸಲಾಗಿದೆ ಎಂದು ಡಯಾಗ್ನೋಸ್ಟಿಕ್ ಕೇಂದ್ರ ರೇಡಿಯಾಲಜಿಸ್ಟ್ ಡಾ. ಎಸ್. ರಕ್ಷಿತ್ ತಿಳಿಸಿದರು.
ಅತ್ಯಾಧುನಿಕ ಸ್ಕ್ಯಾನಿಂಗ್ ಸೌಲಭ್ಯದ ಜೊತೆಗೆ ಹೃದಯ, ಶ್ವಾಸಕೋಶ ಹಾಗೂ ಗ್ಯಾಸ್ಟ್ರೋ ಎಂಟರಾಲಜಿಗೆ ಸಂಬಂಧಿಸಿ ವಿಶೇಷ ಚಿಕಿತ್ಸೆ ಕೂಡ ನೀಡಲಾಗುವುದು, ಸ್ಕ್ಯಾನಿಂಗ್ ಫಲಿತಾಂಶ ಪಡೆಯಲು ಇಲ್ಲಿ ದಿನಗಟ್ಟಲೇ ಕಾಯಬೇಕಾದ ಅವಶ್ಯಕತೆ ಇಲ್ಲ. ಯಾವುದೇ ವಿಳಂಬವಿಲ್ಲದಂತೆ ತ್ವರಿತವಾಗಿ ಸ್ಪಷ್ಟ, ಸ್ಥಿರ ಹಾಗೂ ಸಕಾಲಿಕವಾದ ವರದಿ ನೀಡಲಾಗುವುದು. ದೊಡ್ಡಬಳ್ಳಾಪುರದ ನಾಗರಿಕರು ಶ್ರೇಷ್ಠ ಡಯಾಗ್ನೋಸ್ಟಿಕ್ ಕೇಂದ್ರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಶ್ರೇಷ್ಠ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ರೇಡಿಯಾಲಜಿಸ್ಟ್ಗಳಾದ ಡಾ.ಎಸ್.ರಕ್ಷಿತ್, ಡಾ.ಎಂ.ವಿನಯ್, ತಜ್ಞ ವೈದ್ಯರಾದ ಡಾ.ದತ್ತ ಎಂ. ತೊಗಲೂರೆ, ಡಾ.ಸಚಿನ್, ಡಾ.ಎಂ.ಸಂಗಮೇಶ್ ತೊಗಲೂರೆ ಹಾಗೂ ಎಂ.ಜಿ.ಪ್ರಕಾಶ್ ಅವರು ರೋಗಿಗಳ ಸೇವೆಗೆ ಲಭ್ಯವಿರಲಿದ್ದಾರೆ.