ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ ೪೮ ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ಲೈಂಗಿಕ ಸಮಸ್ಯೆಗೆ ಪರಿಹಾರ ಮಾಡುವುದಾಗಿ ಹೇಳಿ ಟೆಕ್ಕಿಯಿಂದ ೪೮ ಲಕ್ಷ ರೂ. ದೋಚಲಾಗಿದೆ. ಟೆಕ್ಕಿ ೪೮ ಲಕ್ಷ ರೂ. ಸಾಲ ಮಾಡಿ ಆಯುರ್ವೇದಿಕ್ ಔಷಧಿ ಖರೀದಿಸಿದ್ದರು. ಆದರೆ ಔಷಧಿಯಿಂದ ಸಾಫ್ಟ್ ವೇರ್ ಇಂಜಿನಿಯರ್ ತಮ್ಮ ಕಿಡ್ನಿಯನ್ನೇ ಕಳೆದುಕೊಂಡಿದ್ದಾರೆ.
ಪುಟ್ ಪಾತ್ ಪಕ್ಕದ ಟೆಂಟ್ ನಲ್ಲಿ ಆಯುರ್ವೇದ ಚಿಕಿತ್ಸೆ ನೆಪದಲ್ಲಿ ವಂಚಿಸಲಾಗಿದೆ. ಮೊದಲು ಕೆಂಗೇರಿ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದ ಟೆಂಟ್ ಬಳಿ ಹೋಗಿದ್ದ ವೇಳೆ ವಿಜಯ್ ಗುರೂಜಿಗೆ ಹೇಳಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ವ್ಯಕ್ತಿ ಭರವಸೆ ನೀಡಿದ್ದಾನೆ. ದೇವರಾಜ್ ಬೂಟಿ ಹೆಸರಿನ ೧ ಗ್ರಾಂ ಔಷಧಿಗೆ ೧,೬೦,೦೦೦ ರೂ. ದರ ನಿಗದಿ ಮಾಡಲಾಗಿದೆ. ಯಶವಂತಪುರದ ಆಯುರ್ವೇದಿಕ್ ಶಾಪ್ ನಲ್ಲಿ ಖರೀದಿಸುವಂತೆ ಸಲಹೆ ನೀಡಿದ್ದಾನೆ. ವಿಜಯಲಕ್ಷಿ÷್ಮÃ ಶಾಪ್ ಖರೀದಿಸಬೇಕು. ಆನ್ ಲೈನ್ ಪೇಮೆಂಟ್ ಬೇಡ, ಯಾರ ಜೊತೆಗೂ ಬರಬಾರದು ಎಂದು ಷರತ್ತು ಹಾಕಿದ್ದ.
ಹಲವು ಬಾರಿ ದೇವರಾಜ್ ಬೂಟಿ ಮತ್ತು ಭವನ ಬೂಟಿ ತೈಲ ಖರೀದಿಸಿದ್ದ. ಒಟ್ಟು ೧೭ ಲಕ್ಷ ರೂ. ಖರ್ಚು ಮಾಡಿ ಔಷಧಿ ಖರೀದಿಸಿದ್ದ ತೇಜಸ್ ಚಿಕಿತ್ಸೆ ಬಳಿಕವೂ ಲೈಂಗಿಕ ಸಮಸ್ಯೆಗೆ ಪರಿಹಾರವಾಗಿರಲಿಲ್ಲ. ಹಣದ ಕೊರತೆಯಿಂದ ತೇಜಸ್ ಊಆಈಅ ಬ್ಯಾಂಕ್ ಖಾತೆಯಲ್ಲಿ ಲೋನ್ ಪಡೆದಿದ್ದ. ೨೦ ಲಕ್ಷ ರೂ. ಲೋನ್ ತೆಗೆದು ಒಟ್ಟು ೧೮ ಗ್ರಾಂ. ಔಷಧಿ ಖರೀದಿಸಿದ್ದ.
ಬಳಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತೇಜಸ್ ರಕ್ತ ಪರೀಕ್ಷೆ ಮಾಡಿಸಿದ್ದ ಈ ವೇಳೆ ಟೆಕ್ಕಿ ಕಿಡ್ನಿಗೆ ಸಮಸ್ಯೆ ಆಗಿರುವುದು ಪತ್ತೆಯಾಗಿದೆ. ಆಯುರ್ವೇದ ಚಿಕಿತ್ಸೆಯಿಂದ ಕಿಡ್ನಿಗೆ ಹಾನಿಯಾಗಿರುವುದು ಪತ್ತೆಯಾಗಿದೆ. ವಿಜಯ್ ಗುರೂಜಿ, ವಿಜಯಲಕ್ಷಿ÷್ಮ ಆಯುರ್ವೇದಿಕ್ ವಿರುದ್ಧ ದೂರು ನೀಡಲಾಗಿದೆ. ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



