ಇಸ್ಲಾಮಾಬಾದ್: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಪಾಕಿಸ್ತಾನ ತಂಡದಲ್ಲಿ ಅನ್ಕ್ಯಾಪ್ಡ್ ಉಸ್ಮಾನ್ ಖಾನ್ ಅವರನ್ನು ಆಯ್ಕೆ ಮಾಡಿದೆ. ವಿಪರ್ಯಾಸ ಎಂದರೆ ಈ ಆಟಗಾರನಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಐದು ವರ್ಷಗಳ ಕಾಲ ನಿಷೇಧಿಸಿತ್ತು.
ಆದರೆ ಆತ ದೇಶಕ್ಕಾಗಿ ಆಡಲು ಆಸಕ್ತಿ ತೋರಿದ ಕಾರಣಕ್ಕೆ ತಂಡದಲ್ಲಿ ಅವಕಾಶ ನೀಡಲಾಗಿದೆ.28 ವರ್ಷದ ಖಾನ್ ಅವರು ತಮ್ಮ ಹುಟ್ಟಿದ ದೇಶಕ್ಕಾಗಿ ಆಡಲು ಆಸಕ್ತಿ ತೋರಿಸಿದ ನಂತರ ಮತ್ತು ಕಾಕುಲ್?ನ ಸೇನಾ ತರಬೇತಿ ಅಕಾಡೆಮಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಶಿಬಿರದಲ್ಲಿ ಭಾಗವಹಿಸಿದ್ದರು. ಆದರೆ ಅದಕ್ಕಿಂತ ಒಂದು ವಾರ ಮೊದಲು ಈ ಆಟಗಾರನನ್ನು ಇಸಿಬಿ ನಿಷೇಧ ಮಾಡಿದೆ.
ಖಾನ್ ಅವರು “ಇಸಿಬಿ ಒದಗಿಸಿದ ಅವಕಾಶಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ಇನ್ನು ಮುಂದೆ ಇಸಿಬಿಗಾಗಿ ಆಡಲು ಬಯಸುವುದಿಲ್ಲ. ಅರ್ಹತೆಯ ಮಾನದಂಡಗಳನ್ನು ಪೂರ್ಣಗೊಳಿಸಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಎಮಿರೇಟ್ಸ್? ? ಕ್ರಿಕೆಟ್?? ಮಂಡಳಿ ಹೇಳಿದೆ.