This is the title of the web page
This is the title of the web page

ನಂಬಿಕೆ, ವಿಶ್ವಾಸದಿಂದ ಉತ್ತಮ ರಾಜಕೀಯ ಭವಿಷ್ಯ ಕೆ.ವಿ. ನವೀನ್ ಕಿರಣ್ ಔತಣಕೂಟದಲ್ಲಿ ಸಚಿವ ಡಾ.ಕೆ. ಸುಧಾಕರ್ ಆಶಯ

ಚಿಕ್ಕಬಳ್ಳಾಪುರ: ತಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಸಕ್ರಿಯವಾಗಿ ಕೆಲಸ ಮಾಡಿದಲ್ಲಿ ಭವಿಷ್ಯದ ನಾಯಕರಾಗುವುದರಲ್ಲಿ ಸಂದೇಹವಿಲ್ಲ ಎಂದು ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭರವಸೆ ನೀಡಿದರು.
ನಗರದ ಹೊರವಲಯದ ಸಿವಿವಿ ಕ್ಯಾಂಪಸ್ ನಲ್ಲಿ ಭಾನುವಾರ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನವೀನ್ ಕಿರಣ್ ಅವರಲ್ಲಿ ನಿಷ್ಠೆ ಇದೆ, ರಾಜಕಾರಣದಲ್ಲಿ ನಂಬಿಕೆ ಮುಖ್ಯ, ಈಗ ಸಮಾಜ, ಜನ ಬದಲಾಗುತ್ತಿದ್ದಾರೆ. ಇಂತಹ ದಿನಮಾನಗಳಲ್ಲಿ ನಂಬಿಕೆ, ಸ್ನೇಹ ಮುಖ್ಯವಾದ ಗುಣಗಳು, ಇವನ್ನು ಅಳವಡಿಸಿಕೊಂಡವರು ನವೀನ್ ಕಿರಣ್ ಆಗಿದ್ದು, ಇದಕ್ಕೆ ಸಿವಿವಿ ರಕ್ತವೇ ಕಾರಣ ಎಂದು ಹೇಳಿದರು.

ತಮ್ಮ ಮೇಲೆ ನಂಬಿಕೆ ಇಟ್ಟು ಸಕ್ರಿಯವಾಗಿ ಕೆಲಸ ಮಾಡಿದರೆ ಭವಿಷ್ಯದ ನಾಯಕರಾಗಲಿದ್ದೀರಿ, ಮುಂದಿನ ದಿನಗಳಲ್ಲಿ
ಅವಕಾಶಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಗುಡಿಬಂಡೆ, ಬಾಗೇಪಲ್ಲಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮುದಾಯ ಮತ್ತು ಯುವಕರ ಸಂಘಟನೆ ಮಾಡಲು ಮುಖ್ಯಮಂತ್ರಿಗಳು ಅವರಿಗೆ ಸೂಚಿಸಿದ್ದು, ಆ ನಿಟ್ಟಿನಲ್ಲಿ ಅವರು ಶ್ರಮಿಸುವಂತೆ ಸಲಹೆ ನೀಡಿದರು.

ಬಿಜೆಪಿ ಎಲ್ಲರಿಗೂ ಸಮಾನಅವಕಾಶ ನೀಡುವ ಪಕ್ಷ, ಪ್ರಣಾಳಿಕೆ ಸಮಿತಿಗೆ ತಮ್ಮನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿರುವುದೇ ಇದಕ್ಕೆ ಸಾಕ್ಷಿ. ಸಕ್ರಿಯವಾಗಿ ಕೆಲಸಮಾಡಿದರೆ ಅವಕಾಶ ಸಿಗಲಿದೆಎಂಬುದಕ್ಕೆ ಇದೇ ನಿದರ್ಶನ. ಬಿಜೆಪಿಯಲ್ಲಿ ಒಂದಲ್ಲ ಒಂದು
ಕಾರ್ಯಕ್ರಮ ನಿರಂತರವಾಗಿರಲಿದೆ. ಒಬ್ಬ ನೈಜ ನಾಯಕನಾದವನು ಹೆಚ್ಚು ನಾಯಕರನ್ನು ಬೆಳೆಸಬೇಕೆ ಹೊರತು ಕಾರ್ಯ
ಕರ್ತರು ಮತ್ತು ಹಿಂಬಾಲಕರನ್ನಲ್ಲ ಎಂಬ ತತ್ವದಡಿ ತಾವು ನಂಬಿಕೆ ಇಟ್ಟಿದ್ದು, ಅದೇ ಹಾದಿಯಲ್ಲಿ ಸಾಗುತ್ತಿರುವುದಾಗಿ ತಿಳಿಸಿದರು.
ಕ್ಷೇತ್ರದಲ್ಲಿ ಯುವ ನಾಯಕತ್ವ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.

ಇದರಿಂದ ಈ ಕ್ಷೇತ್ರದಲ್ಲಿ ಮುಂದಿನ ಎರಡು ಮೂರು ದಶಕಗಳು ಅವರು ನಾಯಕರಾಗಿರಬೇಕು ಎಂಬ ಉದ್ಧೇಶ ಹೊಂದಿದ್ದು, ಯಾರ ಬಗ್ಗೆಯೂ ನನಗೆ ಹೆದರಿಕೆ ಇಲ್ಲ. ವಿಶ್ವಾಸದಿಂದ ನಮ್ಮ ನಾಯಕರನ್ನು ನಡೆಸಿಕೊಳ್ಳುತ್ತೇನೆ, ಒಗ್ಗಟ್ಟಿನಲ್ಲಿ ಬಲವಿದೆ, ಎಲ್ಲರೂ ಸೇರಿ ಸಕ್ರಿಯವಾಗಿ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.
ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಮೂರೂ ಜಿಲ್ಲೆಗಳಿಂದ ಕನಿಷ್ಠ 8 ಸ್ಥಾನ ಗೆಲ್ಲಬೇಕು. ಇದರಿಂದ ಜಿಲ್ಲೆಗೆ ಹೆಚ್ಚು ಅಧಿಕಾರ ಪಡೆಯಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ನವೀನ್ ಕಿರಣ್ ಅವರು ಮತ್ತಷ್ಟು ಸಕ್ರಿಯರಾಗಿ ಅವರದೇ ಆದ ಕೊಡುಗೆ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ನೀಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್, ಕೆವಿಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಬಿ. ಮುನಿಯಪ್ಪ, ನಗರಸಭಾ ಸದಸ್ಯೆ ನಿರ್ಮಲಾಪ್ರಭು, ಖಾದಿ ಮತ್ತು ಗ್ರಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಬಿಜೆಪಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಮರಳು
ಕುಂಟೆ ಕೃಷ್ಣಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ರಾಮಸ್ವಾಮಿ ಇದ್ದರು.