This is the title of the web page
This is the title of the web page

ಜಾತ್ರೆಯಲ್ಲಿ ಏರ್ ಬಲೂನ್ ಆಡುವಾಗ ಅಸ್ವಸ್ಥತೆಯಿಂದ ಮೃತಪಟ್ಟ ಬಾಲಕ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಶಾಂತಿನಗರದ ಮಂಜುನಾಥ್ ಎಂಬುವರ 11 ವರ್ಷದ ಮಗ ಏರ್ ಬಲೂನ್ ಆಡಿದ ನಂತರ ಲೋ ಬಿಪಿಯಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ನಗರ ದೇವತೆ ಶ್ರೀ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಅಳವಡಿಸಿದ್ದ ಏರ್ ಬಲೂನ್ ಆಟವಾಡಿದ ನಂತರ ಲೋ ಬಿಪಿಯಾಗಿದ್ದು, ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ಬುಧವಾರ ನಡೆದಿದೆ.

ಶಾಂತಿನಗರದ ನಿವಾಸಿ ಮಂಜುನಾಥ್(ವಡೆ ಮಂಜು) ಅವರ ಪುತ್ರ ಶ್ರೇಯಸ್ ಆರಾಧ್ಯ(11) ಮೃತ ಬಾಲಕ. ಸಂಜೆ 6.45ರಲ್ಲಿ ಘಟನೆ ಸಂಭವಿಸಿದೆ.

ದೇವಸ್ಥಾನದ ಮುಂದೆ ಮನರಂಜನಾ ಆಟದ ಸಾಮಗ್ರಿಗಳನ್ನು ಅಳವಡಿಸಿದ್ದು, ಮಕ್ಕಳ ಮನರಂಜನೆಗಾಗಿ ಅಳವಡಿಸಿದ್ದಏರ್ ಬಲೂನ್ ಆಟವಾಡಿದ ನಂತರ ಬಾಲಕ ಅಸ್ವಸ್ಥಗೊಂಡಿದ್ದು,ಬಾಲಕನನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಬಾಲಕ ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.