ಬೆಂಗಳೂರು: ಇಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಬಿಎಂಟಿಸಿ ಬಸ್ಗೆ ಹಿಂದಿನಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ದಿಯಾ ಎನ್ನುವ 9 ವರ್ಷದ ಮಗು ಮತ್ತು ಚಾಲಕ ಲೊಕೇಶನ್ ಅವರು ಸಹ ಸಣ್ಣ ಪುಟ್ಟ ಗಾಯಗಳಿಂದ ಗಾಯಗೊಂಡಿರುತ್ತಾರೆ.
ನಾಯಂಡಹಳ್ಳಿ ರಿಂಗ್ ರಸ್ತೆ ಬಳಿ ಈ ಘಟನೆ ಸಂಭವಿಸಿದ್ದು, ಕಾರು ಬಸ್ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಹೊತ್ತಿ ಉರಿದಿದೆ.
ಬಸ್ ಚಾಲಕನ ಪ್ರಜ್ಞೆಯಿಂದಾಗಿ ಬಸ್ಗೆಹೊತ್ತಿದ್ದ ಬೆಂಕಿಯನ್ನು ಹಾರಿಸಲಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಕಾರಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.