ಶಿಡ್ಲಘಟ್ಟ: ಹನುಮಂತಪುರದ ಗೇಟ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಅಂಗಡಿ ಕಂಪೌಂಡ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಶಿಡ್ಲಘಟ್ಟ ನಗರ ಹೊರ ವಲಯದ ಶಿಡ್ಲಘಟ್ಟ – ದಿಬ್ಬೂರಹಳ್ಳಿ ಮುಖ್ಯರಸ್ತೆಯ ಹನುಮಂತಪುರದ ಗೇಟ್ ಸಮೀಪ ಈ ಘಟನೆ ನಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಅಂಗಡಿಯ ಮುಂಭಾಗ ಇದ್ದ ಕಬ್ಬಿಣದ ಹಂಗಲ್ ಮುರಿದು ಬಿದ್ದಿದೆ, ಕಾಪೌಂಡ್ ಗೋಡೆ ಕುಸಿದಿದೆ, ಮುಂದೆ ಅಡ್ಡಲಾಗಿ ಬಂದ ವಾಹನವನ್ನು ತಪ್ಪಿಸಲು ಹೋಗಿ ಅಪಘಾತ ನಡೆದಿದೆ ಎನ್ನಲಾಗುತ್ತಿದೆ,
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿಡ್ಲಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.