ಸೌದಿ ಅರೇಬಿಯಾದ ದಮ್ಮಾಮ್ ನಿಂದ ಹೈದರಾಬಾದ್ ಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅನುಚಿತವಾಗಿ ಸ್ಪರ್ಶಿಸಿದ ಆರೋಪದ ಮೇಲೆ ವೃದ್ಧ ಪ್ರಯಾಣಿಕರೊಬ್ಬರ ವಿರುದ್ಧ ಹೈದರಾಬಾದ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ವಿಮಾನ ಇಲ್ಲಿಗೆ ಬಂದ ನಂತರ, ಕ್ಯಾಬಿನ್ ಸಿಬ್ಬಂದಿ ಡಿಸೆಂಬರ್ 13 ರಂದು ಸುಮಾರು 60 ವರ್ಷ ವಯಸ್ಸಿನ ಪ್ರಯಾಣಿಕನ ವಿರುದ್ಧ ಆರ್ಜಿಐ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದಾಗ್ಯೂ, ಪ್ರಯಾಣಿಕ ತಾನು ಉದ್ದೇಶಪೂರ್ವಕವಾಗಿ ಈ ದುಷ್ಕೃತ್ಯವನ್ನು ಎಸಗಿಲ್ಲ. ಆಕಸ್ಮಿಕವಾಗಿ ಟಚ್ ಆಗಿದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.



