ಬೇಲೂರು: ಸಂವಿಧಾನ ಪಿತಾಮಹ ಡಾ.ಬಿ.ಆರ್ ಅಂಬೇಡ್ಕರ್ ರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಗೈದ ಆರೋಪಿ ವಿರುದ್ಧ ಬೇಲೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜೈಲು ಪಾಲಾದ ಘಟನೆ ನಡೆದಿದೆ.ಏ.24 ರಂದು ಸಂಜೆ 5 ಗಂಟೆಯಲ್ಲಿ ಪಟ್ಟಣದ ಲಕ್ಷ್ಮಿಪುರ ಬಡಾವಣೆಯ ವಿಷ್ಣು
ಪ್ರಸಾದ್ ಬಿ.ಕೆ ಎಂಬುವವರು ನಮ್ಮ ಬೇಲೂರು ಎಂಬ ಫೇಸ್ ಬುಕ್ ಪೇಜ್ ನ ಮೂಲಕ ಯಾದಗಿರಿಯಲ್ಲಿ ನಡೆದ ದಲಿತ ಯುವಕನ ಹತ್ಯೆ ಸುದ್ದಿ ಕುರಿತು ದಲಿತರಿಗೆ ಎಲ್ಲಿದ್ದೀರಾ ಛೋಟಾ ಭೀಮ್ ಅಭಿಮಾನಿಗಳು,
ಸಂಘರ್ಷ ಹೋರಾಟಗಾರರು, ಯಾರೂ ಮಾತಾಡುತ್ತಲೆ ಇಲ್ಲವಲ್ಲ ಕಲಬೆರಕೆಗಳು, ಲದ್ದಿ ಜೀವಿಗಳು, ಮೊನ್ನೆ ಅಶಾಂತಿ ಧೂತರ ಹಬ್ಬದ ದಿನ ಎಸೆದಿರೋ ಮೂಳೆಗಳನ್ನು ಇನ್ನೂ ಕಡೀತಾ ಇದ್ದೀರಾ, ನ್ಯಾಯವಾದಿಗಳೇ ಎಂದು ಪೋಸ್ಟ್ ಮಾಡಿದ್ದ. ಇದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಛೋಟಾ ಭೀಮ್ ಎಂದು ಅಪಮಾನಿಸಿದ್ದು ಹಾಗೂ ಶಾಂತಿಧೂತರ ಹಬ್ಬದ ದಿನ ಎಸೆದಿರೋ ಮೂಳೆಗಳನ್ನು ಇನ್ನೂ ಕಡೀತಾ ಇದ್ದೀರಾ ಎಂದು ದಲಿತ ಸಮುದಾಯವನ್ನು ಅಪಮಾನಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಗೋವಿನಹಳ್ಳಿಯ ಚಂದ್ರಶೇಖರ್ ಎಂಬುವರು ನೀಡಿದ ದೂರು ಆಧರಿಸಿ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮಾತನಾಡಿ. ಬಾಬಾಸಾಹೇಬ್ ಡಾ.ಅಂಬೇಡ್ಕರ್ ಎಂದರೆ ಇಡೀ ವಿಶ್ವ ಜ್ಞಾನದ ಸಂಕೇತ ಎಂದು ಪರಿಗಣಿಸಿದೆ. ಖುದ್ದು ವಿಶ್ವಸಂಸ್ಥೆ ವಿಶ್ವದ ಅತಿದೊಡ್ಡ ಸಂಘಟನೆ ಬಾಬಾಸಾಹೇಬರದ್ದು ಮತ್ತು ಮಾನವ ಕುಲಕ್ಕೆ ಅವರು ನೀಡಿದ ಜ್ಞಾನವನ್ನು ಅರಿತು ಅವರ ಜನ್ಮದಿನವನ್ನು World Knowledge Day ಎಂದು ಘೋಷಿಸಿದೆ. ಈ ಕ್ಷಣಕ್ಕೂ ಬಾಬಾಸಾಹೇಬರ ವಿದ್ಯಾರ್ಹತೆಗೆ ಸರಿಸಾಟಿಯಾದ ಒಬ್ಬನೇ ಒಬ್ಬ ವ್ಯಕ್ತಿ ಈ ಜಗತ್ತಿನಲ್ಲೇ ಇಲ್ಲ.! ಬಾಬಾಸಾಹೇಬರು ಬರೆದ ಭಾರತದ ಸಂವಿಧಾನವನ್ನು ಅತ್ಯಂತ ಶ್ರೇಷ್ಟ ಸಂವಿಧಾನ ಎಂದು ವಿಶ್ವವೇ ಕೊಂಡಾಡುತ್ತಿದೆ.
ವಿಶ್ವದ ವಿದ್ವಾಂಸರುಗಳೇ ಬಾಬಾಸಾಹೇಬರನ್ನು ಆದರ್ಶವಾಗಿಸಿಕೊಂಡಿರುವಾಗ ಬೇಲೂರಿನ ವಿಷ್ಣುಪ್ರಸಾದ್ ರವರು ಬಾಬ ಸಾಹೇಬರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಗೈದಿರವುದು ಎಷ್ಟು ಮಟ್ಟಿಗೆ ಸರಿ ಈ ಕೂಡಲೇ ಈ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಸಂಘಟನ ಸಂಚಾಲಕ ಪ್ರದೀಪ್ ಕುಮಾರ್ ಪಿ.ಸಿ, ದಲಿತ ಮುಖಂಡರಾದ . ಗೋವಿನಹಳ್ಳಿ ಚಂದ್ರಶೇಖರ್, ಶೇಟ್ಟಿಗೆರೆ ರಘು, ಭೀಮ್ ಆರ್ಮಿ ತಾಲ್ಲೂಕು ಅಧ್ಯಕ್ಷ ಕೀರ್ತಿ, ಸೇರಿದಂತೆ ಮತ್ತಿತರ ಮುಖಂಡರು ಹಾಜರಿದ್ದರು.