ಚಳ್ಳಕೆರೆ: ತಾಲೂಕಿನ ಪರಜಾಪುರ ಹೋಬಳಿಯ ಚೌಳೂರು ಗ್ರಾಮದ ಪಿ.ಎಸ್.ಸುಧಾಕರ್ ಎಂಬ ರೈತನ ಜಮೀನಿನಲ್ಲಿದ್ದ. ಸುಮಾರು ಆರು ಟ್ರಾಕ್ಟರ್ ಲೋಡ್ ನಷ್ಟು, ಶೇಂಗಾ ಬಳ್ಳಿ ಮೇವಿಗೆ, ದುಷ್ಕರ್ಮಿ ಗಳು ಬೆಂಕಿ ಹಚ್ಚಿದ ಪ್ರಕರಣ ನಡೆದಿದೆ.
ತಾಲೂಕಿನಲ್ಲಿ ಮಳೆ ಇಲ್ಲದೆ. ರೈತರು ಬರಗಾಲದಿಂದ ಕಂಗಾಲಾಗಿದ್ದ ಪರಿಸ್ಥಿತಿಯಲ್ಲಿ, ಜಾನುವಾರುಗಳಿಗೆ ಹುಲ್ಲು ಸಂಗ್ರಹಿಸಿದ್ದ. ಬಣವಿಯ ಮೇಲೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ರೈತನ ಮೇಲಿನ ಸಿಟ್ಟನ್ನು, ಮೂಕ ಪ್ರಾಣಿ ಗಳ ಮೇವಿನ ಮೇಲೆ ತೀರಿಸಿಕೊಂಡಂತಾಗಿದೆ. ರೈತ ಸುಧಾಕರ್ ದೂರವಾಣಿಯ ಮೂಲಕ ಈ ದುಷ್ಕೃತ್ಯದ ಬಗ್ಗೆ ಮಾಹಿತಿ ತಿಳಿಸಿದ್ದು.
ಪೊಲೀಸರು ಸ್ಥಳಕ್ಕೆ ಬಂದು. ರೈತ ಸುಧಾಕರಿಂದ ಮಾಹಿತಿ ಪಡೆದು. ಈ ವೇಳೆ ಸುಧಾಕರ್ ಜಮೀನಿನ ಮೂರು ದಿಕ್ಕಗಳ ಚೆಕ್ ಬಂದಿಯ ಇರುವ ನೆರೆಯ ರೈತರು ನನ್ನ ಜಮೀನಿನ ಮೂರು ದಿಕ್ಕುಗಳಲ್ಲಿಯೂ ಅಕ್ರಮವಾಗಿ ನನ್ನ ಜಮೀನನ್ನು ಒತ್ತುವರಿ ಮಾಡಿದ್ದಾ ರೆ. ಇದೇ ಕಾರಣಕ್ಕೆ ನನ್ನ ಮೇಲೆ ಪದೇ ಪದೇ ಇವರು ಗಲಾಟೆ ಮಾಡುತ್ತಿದ್ದ ರು. ಇದೇ ಕಾರಣದಿಂದ ನನ್ನ ಹುಲ್ಲಿನ ಬಣೆವೆಗೆ ಬೆಂಕಿ ಇಟ್ಟಿದ್ದಾರೆ ಎಂದು ದೂರು ನೀಡಿದರು.