ಬೆಳಗಾವಿ : ಕಬ್ಬಿನ ದರ ಹೆಚ್ಚಿಗೆ ಮಾಡುವಂತೆ ಬೆಳಗಾವಿ ಜಿಲ್ಲೆಯ ಹತ್ತಿರಗಿ ಗ್ರಾಮದಲ್ಲಿ ಕಳೆದ ೯ ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರು. ನಿನ್ನೆ ಗಲಭೆ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಲಾಗಿತ್ತು. ಹತ್ತರಗಿ ಗ್ರಾಮದಲ್ಲಿ ಕಲ್ಲುತೂರಾಟ ನಡೆಸಿದ ೧೧ ಆರೋಪಿಗಳ ವಿರುದ್ಧ ಇದೀಗ ಎಫ್ ಐ ಆರ್ ದಾಖಲಾಗಿದೆ. ಪಿ ಎಸ್ ಐ ಆರ್ ವಿ ಪಾಟೀಲ್ ನೀಡಿದ ದೂರಿನ ಅನ್ವಯ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆಯ ವೇಳೆ ಪೊಲೀಸರನ್ನು ಕೊಲೆ ಮಾಡುವ ಉದ್ದೇಶದಿಂದ ಕಲ್ಲುತೂರಾಟ ಮಾಡಿ ಪೊಲೀಸರನ್ನು ಒದ್ದು ಹಲ್ಲೆ ಮಾಡಿದ್ದಾರೆ ತೀವ್ರ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಬಿಎನ್ಎಸ್ ಕಾಯ್ದೆಯ ಅಡಿ ೧೮೯(೨), ೧೯೧(೨), ೧೯೧(೩), ೨೮೫, ೧೩೨, ೧೨೧(೧), ೧೨೧(೨), ೧೦೯, ೩೨೪, ೧೯೪ ಮತ್ತು ಸಾರ್ವಜನಿಕ ಆಸ್ತಿ ಹಾನಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಘಟನೆಯಲ್ಲಿ ೧೦೦ ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ೨ ಪೊಲೀಸ್ ವನ್ ೪ ಬಸ್ ಗಳಿಗೂ ಹಾನಿ ಮಾಡಿರುವ ಕುರಿತು ಉಲ್ಲೇಖಿಸಿದ್ದಾರೆ ಕಲ್ಲು ತೂರಾಟ ಮಾಡಿರುವ ಆರೋಪಿಗಳ ಪತ್ತೆಗೆ ಇದೀಗ ವಿಶೇಷ ತಂಡ ರಚನೆ ಮಾಡಲಾಗಿದೆ. ಸಿಸಿಟಿವಿ ಮೊಬೈಲ್ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ಬಳಿ ನಿನ್ನೆ ಗಲಾಟೆ ನಡೆದಿತ್ತು.



