ಬೆಂಗಳೂರು: ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಗುಪ್ಪೆ ಕ್ರಾಸ್ ಬಳಿ ಸಬೀನಾ(೬) ಎಂಬ ಮಗು ಆಟವಾಡುತ್ತಿದ್ದ ಸಮಯದಲ್ಲಿ ಕಾರು ಚಾಲಕ ಅಜಾಗರೂಕತೆಯಿಂದ ಕಾರು ಚಲಾಯಿಸಿ ಮಗುವಿನ ಸಾವಿಗೆ ಕಾರಣ ಆಗಿರುತ್ತಾನೆ. ಅತ್ತಿಬೆಲೆ ಪೊಲೀಸರು ಅಪಘಾತ ಪ್ರಕರಣ ದಾಖಲು ಮಾಡಿಕೊಂಡು ಚಾಲಕರನ್ನು ಬಂಧಿಸಿ ಕ್ರಮ ಕೈಗೊಂಡಿರುತ್ತಾರೆ.



