ತಿಪಟ್ಟೂರು: ನಮ್ಮೂರಿನಲ್ಲಿ ನಡೆಯುತ್ತಿರುವ ಮೆಟ್ರಿಕ್ ಮೇಳದಲ್ಲಿ ಮಕ್ಕಳು ವ್ಯಾಪಾರ ಮಾ ಡೋದು ನೋಡಿದರೆ ಮೆಟ್ರೋ ಮಾರುಕಟ್ಟೆ ಕೂಡ ನಾಚುವಂತಿದೆ ಎಂದು ಹಿರಿಯ ವಿದ್ಯಾರ್ಥಿ ಗಳ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ ಅಭಿಪ್ರಾಯಪಟ್ಟರು.
ಜಕ್ಕನಹಳ್ಳಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಶಾಲಾ ಹಂತದಲ್ಲಿ ನಡೆದ ಮಕ್ಕಳ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಪಂಚಾಕ್ಷರಿ ಅವರು ಮಕ್ಕಳ ಶಿಸ್ತು ,ಬದ್ಧತೆ ಗ್ರಾಹಕರನ್ನು ಸೆಳೆಯುವ ರೀತಿ ,ಅವರು ಧರಿಸಿರುವ ಒಂದೇ ತೆರನಾದ ಶುಭ್ರತೆಯಿಂದ ಕೂಡಿದ ಸಮವಸ್ತ್ರ ಧರಿಸಿದ ಹಾಗೂ ನಗುಮುಖದಿಂದ ವ್ಯವಹರಿಸುವ ವಿದ್ಯಾರ್ಥಿಗಳು , ಸಿಹಿ ,ಖಾರದ, ಹಾಗೂ ದೈನಂದಿನ ಬಳಕೆಯ ಪದಾರ್ಥಗಳನ್ನು ಮತ್ತು ಸೊಪ್ಪು ತರಕಾರಿ ಎಳನೀರುಗಳನ್ನು ಜೋಡಿಸಿಟ್ಟಿರುವ ರೀತಿ ಎಲ್ಲವನ್ನು ನೋಡಿದರೆ ಮೆಟ್ರೋ ಮಾರುಕಟ್ಟೆಯು ನಾಚುವಂತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಹಿರಿಯ ಶಿಕ್ಷಕರಾದ ಶಿವಕುಮಾರ್ ಅವರು ಮಕ್ಕಳು ಶಾಲೆಯ ಕಲಿಕೆಯ ಜೊತೆಗೆ ಇಂತಹ ಸಮುದಾಯವನ್ನೊಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳ ವ್ಯವಹಾರಿಕ ಜ್ಞಾನವು ಇಮ್ಮಡಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎಸ್ಡಿಎಂಸಿ ಅಧ್ಯಕ್ಷರಾದ ನರಸಿಂಹ ಮೂರ್ತಿಯವರು ನಮ್ಮೂರಿನ ಶಾಲೆಯ ಶಿಕ್ಷಕರು ಮಕ್ಕಳ ಕಲಿಕೆಗೆ ಪೂರಕವಾದ ಯಾವ ಕಾರ್ಯಕ್ರಮವನ್ನು ಕೈಗೊಂಡರು ನಾವು ಸದಾ ಅವರ ಬೆಂಬಲಕ್ಕೆ ಇರುತ್ತೇವೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಂಸಿ ರಾಜಶ್ರೀ, ಎಚ್ ಕೆ ಸುಧಾ, ಕಾವ್ಯ ಹಾಗೂ ಅಂಗನವಾಡಿ ಕಾರ್ಯಕರ್ತೆ ಪ್ರಿಯಾಂಕ, ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬಿಕಾಬಸವರಾಜು, ವೇದಮೂರ್ತಿ ಹಾಜರಿದ್ದರು.