ಮಳವಳ್ಳಿ: ತಾಲೂಕಿನ ಬಾಚನಹಳ್ಳಿ ಗ್ರಾಮದಲ್ಲಿ ಎರಡು ಬಿಎಂಟಿಸಿ ಬಸ್ ಹಾಗು ಒಂದು ಕೆಎಸ್ ಆರ್ ಟಿ ಸಿ ಬಸ್ ಗಳ ನಡುವೆ ಢಿಕ್ಕಿ ಹೊಡೆದ ಪರಿಣಾಮ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕರಿಯನಪುರ ಗ್ರಾಮದ ಮಹದೇವ ಎಂಬವರ ಪತಿ ನಾಗಮ್ಮ (೬೦), ಹಲಗಾಪುರದ ಬಸವಣ್ಣ ಎಂಬವರ ಪತ್ನಿ ರತ್ನಮ್ಮ (೪೬) ಮೃತಪಟ್ಟವರು. ಮೃತಪಟ್ಟ ಮತ್ತೊಬ್ಬ ಪ್ರಯಾಣಿಕನ ಗುರುತು ಪತ್ತೆಯಾಗಿಲ್ಲ. ೭೦ ಕ್ಕೂ ಹೆಚ್ಚು ಪ್ರಯಾಣಿಕರು ಗೊಂಡಿದ್ದಾರೆ ಹೇಳಲಾಗಿದೆ
ಭಾನುವಾರ ಸಂಜೆ ಕೊಳ್ಳೇಗಾಲ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಚಕ್ರ ಸ್ಪೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿದ ‘ಪರಿಣಾಮ ಮಳವಳ್ಳಿಯಿಂದ ಕೊಳ್ಳೇಗಾಲ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ. ಅದೇ ಸಮಯದಲ್ಲಿ ಮಳವಳ್ಳಿ ಕಡೆಯಿಂದ ಬಂದ ಇನ್ನೊಂದು ಸಾರಿಗೆ ಬಸ್ ಕೂಡ ಡಿಕ್ಕಿಯಾಗಿದೆ. ಗಾಯಾಳುಗಳನ್ನ ಮಳವಳ್ಳಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಂಭೀರ ಗಾಯಗೊಂಡವರು ಮೈಸೂರು ಆಸ್ಪತ್ರೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮೂರು ಬಸ್ಗಳ ನಡುವೆ ಡಿಕ್ಕಿ: ಮೂವರ ಸಾವು, ೭೦ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
