ಗುಂಡ್ಲುಪೇಟೆ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆ ಹಾಗೂ ವಿವಿಧ ಕನ್ನಡಪರ ಮತ್ತು ಪ್ರಗತಿಪರ ಅಭಿಮಾನಿ ಬಳಗ ವತಿಯಿಂದ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಸಂತಾಪ ಸೂಚಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ಅವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರು. ಮುಖಂಡರುಗಳು ಅಗಲಿದ ನಾಯಕನಿಗೆ ಪುಷ್ಪ ನಮನ ಸಲ್ಲಿಸಿ, ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಿದರು. ಮುಂಬತ್ತಿ ಹಚ್ಚಿ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಸಂಪತ್ತು ಎಂ ಎನ್ ಮಾತನಾಡಿ, ನಮ್ಮೆಲ್ಲರ ನೆಚ್ಚಿನ ರಾಷ್ಟ್ರೀಯ ನಾಯಕರು ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದರು ದಲಿತರ ಕಣ್ಮಣಿ ವಿ. ಶ್ರೀನಿವಾಸಪ್ರಸಾದ್ ಅವರು ನಮ್ಮನ್ನು ಬಿಟ್ಟು ಆಗಲಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಅದ ಛಾಪು ಮೂಡಿಸಿದ್ದ ಸ್ವಾಭಿಮಾನಿ ಚಕ್ರವರ್ತಿ ಎಂದು ಬಿರುದು ಪಡೆದುಕೊಂಡಿದ್ದರು. ದೀನ ದಲಿತರು, ಬಡವರು ಹಾಗೂ ಎಲ್ಲಾ ವರ್ಗದ ಅಭಿವೃದ್ದಿಗೆ ಶ್ರಮಿಸಿದ್ದ ಧೀಮಂತ ನಾಯಕ. ಇಂಥ ಮೇರು ವ್ಯಕ್ತಿತ್ವದ ನಾಯಕನ ಆಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಆ ಕುಟುಂಬಕ್ಕೆ ನೀಡಲಿ ಎಂದರು.
ದಸಂಸ ಸಂಚಾಲಕ ನಂಜುಂಡಸ್ವಾಮಿ ಮಾತನಾಡಿ, ಹಿರಿಯ ನಾಯಕ ಹಾಗೂ ಸಂಸದರಾದ ವಿ. ಶ್ರೀನಿವಾಸಪ್ರಸಾದ್ ಅವರ ನಿಧನದಿಂದ ನಮಗೆ ಅತೀವ ನೋವಾಗಿದೆ. ಅವರು ಅಜಾತ ಶತ್ರುವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಬಣ್ಣಿಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದಾಗ ಅನೇಕ ಮಾರ್ಪಾಡುಗಳನ್ನು ತಂದಿದ್ದರು ಅದರಲ್ಲಿ ಪ್ರಮುಖವಾಗಿ ಪಡಿತರ ಚೀಟಿಯಲ್ಲಿ ಆಧುನಿಕತೆಯನ್ನು ಅಳವಡಿಸಿದ್ದನ್ನು ಸ್ಮರಿಸಿದರು ಅವರು ಕೆಲಸ ಮಾಡಿದ ಕಡೆಗಳಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತಿದ್ದರು ಕಂದಾಯ ಸಚಿವರಾಗಿದ್ದಾಗ ಅರಣ್ಯ ಭೂಮಿಯ ಒತ್ತುವರಿ ಬಗ್ಗೆ ಹಾಗೂ ಬಡವರು, ದೀನದಲಿತರು ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಬೇರೆ ಬೇರೆ ಸಮಸ್ಯೆಗಳಿಗೆ ಸಂಕಷ್ಟಗಳನ್ನು ಪರಿಹರಿಸುವ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.
ಜಾರಕಿಹೊಳಿ ಯುವ ಬ್ರಿಗೇಡ್ ನ ಅಧ್ಯಕ್ಷರಾದ ಗೋವಿಂದ ಮಾತನಾಡಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರ್. ಲಕ್ಕೂರು, ದಸಂಸ ಮುಖಂಡ ಮುತ್ತಣ್ಣ, , ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ನಾಗುಸ್ವಾಮಿ, ಕರವೇ ತಾಲೂಕು ಅಧ್ಯಕ್ಷರು ಸುರೇಶ್ ನಾಯಕ್, ಕರವೇ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ.ವಿ ನಾಯಕ್ ಕಾವಲು ಪಡೆ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲೀಕ್, ಮಿಮಿಕ್ರಿ ರಾಜು ಜಿಪಂ ಮಾಜಿ ಸದಸ್ಯ ಹಂಗಳ ನಾಗರಾಜು, ಗುಂಡ್ಲುಪೇಟೆ ಆನಂದ್, ಕರುನಾಡ ಯುವಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನೀರ್ ಪಾಷಾ, ವಕೀಲ ಕಾಳಸ್ವಾಮಿ, ಪುರಸಭೆ ಮಾಜಿ ಸದಸ್ಯ ಮೋಹನ್, ಮಹದೇವ್, ಚಿಜಲ . ವೇಣು, ಕಬ್ಬಹಳ್ಳಿ ಶಿವಣ್ಣ ತೊಂಡವಾಡಿ, ಶ್ಯಾನಡ್ರಹಳ್ಳಿ ಬಾಬು, ಹರಿಶ್ಚಂದ್ರ, ರವಿ ಬಲಚವಾಡಿ ಜೆ ಸ್ವಾಮಿ ಕನ್ನೆಗಾಲ ಚಿಕ್ಕ ನೆಂಜಯ್ಯ ವಕೀಲರು ಮಲ್ಲಯ್ಯನಪುರ ಇನ್ನು ಮುಂತಾದವರು ಉಪಸ್ಥಿತರಿದ್ದರು .
ಚಾಮರಾಜನಗರ ಜಿಲ್ಲೆಯ ಸಂಸದರು ಹಾಗೂ ಮಾಜಿ ಕೇಂದ್ರ ಪ್ರಭಾವಿ ಸಚಿವರಾದ ವಿ ಶ್ರೀನಿವಾಸ ಪ್ರಸಾದ್ ಅವರ ಮರಣದಿಂದ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಜನರಿಗೆ ತುಂಬಾ ದುಃಖ ತರುವಂತಹ ಸಂಗಾತಿ ಅದಾಗಿ ಅವರು ತುಂಬಾ ಜನರ ಸೇವೆಯನ್ನು ಹೊಂದಿರುತ್ತಾರೆ ನಂಜನಗೂಡಿನಲ್ಲಿ ಅವರು ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದುಹೊಸ ಪ್ಲೇ ಓವರ್ ಸೇತುವೆ ಗೆ ವಿ ಶ್ರೀನಿವಾಸ ಪ್ರಸಾದ್ ಹೆಸರಿಡಬೇಕೆಂದು ಜಿಲ್ಲಾಡಳಿತ ಹಾಗೂ ತಾಲೂಕು ಅಡಳಿತ ಪರವಾಗಿ ಹಾಗೂ ಸಂಘ ಸಂಸ್ಥೆಯ ಪರವಾಗಿ ಹಾಗೂ ಸಂಘ ಸಂಸ್ಥೆಗಳು ರಾಜ್ಯ ಸರ್ಕಾರ ಗಮನಕ್ಕೆ ತಂದು ಅವರ ಹೆಸರಿಡಬೇಕೆಂದು ಜಿಲ್ಲಾ ಆಡಳಿತಕ್ಕೆ ಕರವೇ ತಾಲೂಕು ಅಧ್ಯಕ್ಷರು ಸುರೇಶ್ ನಾಯ್ಕ ಗುಂಡ್ಲುಪೇಟೆ ಒತ್ತಾಯಿಸಿದ್ದಾರೆ.