ಬೆಂಗಳೂರು: ಬ್ಯಾಂಕಿನಿಂದ ಮಾಡಿದ ಸಾಲ ತೀರಿಸಲಾಗದ ಪರಿಣಾಮ ಸಾಲದ ಬಡ್ಡಿ ಬೆಳೆದು ಹೆಚ್ಚಾದ ಹಿನ್ನೆಲೆ ದಂಪತಿ ವಿಧಾನ ಸೌಧದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ಬೆಂಗಳೂರು ಸಿಟಿ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಜೆಜೆನಗರ ನಿವಾಸಿಗಳು ಎನ್ನಲಾದ ಸಹಿಸ್ತಾ ಭಾನು…
ಮತ್ತು ಮುನೇದುಲ್ಲ ಅವರುಗಳು 50 ಲಕ್ಷ ಸಾಲ ಪಡೆದು ಅದು ಬಡ್ಡಿ ಸಮೇತ 90 ಲಕ್ಷ ಆಗಿರುವುದರಿಂದ, ಅದನ್ನು ಹಿಂತಿರುಗಿಸಲು ಸಾಧ್ಯವಾಗದ ಕಾರಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿ ನಡೆದು ಹೋಗುತ್ತಿದ್ದ ಸಾರ್ವಜನಿಕರು ಮತ್ತು ಹೋಂಗಾಡ್ರ್ಸ್ಗಳು ಅವರನ್ನು ರಕ್ಷಿಸಿದ್ದಾರೆ.
ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.