ಟ್ರೇಲರ್ ಬಿಡುಗಡೆಯಾದಾಗಿನಿಂದ ಸ್ಪೈಡರ್ ವರ್ಸ್ನ ಮುಂಬರುವ ಎನಿಮೇಟಡ್ ಚಿತ್ರ ಸ್ಪೈಡರ್ ಮ್ಯಾನ್ ಕುತೂಹಲ ಗಗನಕ್ಕೇರಿದೆ. 2021ರಲ್ಲಿ ಬಿಡುಗಡೆಯಾದ ಸ್ಪೈಡರ್ ಮ್ಯಾನ್ ಯಶಸ್ಸಿನ ನಂತರ ಸಿನಿರಸಿಕರು ಇದನ್ನು ವಿಶ್ವಕ್ಕೆ ತೆಗೆದುಕೊಂಡು ಹೋಗಲು ಉತ್ಸುಕರಾಗಿದ್ದಾರೆ. ಈ ಸಮಯವು ಭಾರತಕ್ಕೆ ವಿಶೇಷವಾಗಿದೆ. ಏಕೆಂದರೆ ಭಾರತೀಯ ಸ್ಪೈಡರ್ ಮ್ಯಾನ್ ಅಂತ ಕರೆಸಿಕೊಂಡಿರುವ ಪವಿತ್ರ ಪ್ರಭಾಕರ್ ಪಾತ್ರವು ದೊಡ್ಡ ಪರದೆಯ ಮೇಲೆ ಪಾದಾರ್ಪಣೆ ಮಾಡಿದೆ.
ಚಿತ್ರದ ಹಿಂದಿ ಮತ್ತು ಪಂಜಾಬಿ ಆವೃತ್ತಿಗಳು ಖ್ಯಾತ ಕ್ರಿಕೆಟಿಗ ಶುಭ್ಮನ್ ಗಿಲ್ ಧ್ವನಿಯನ್ನು ಒಳಗೊಂಡಿರುವುದು ವಿಶೇಷ. ಪವಿತ್ರ ಪ್ರಭಾಕರ್ ದೃಶ್ಯಗಳಿಗೆ ಧ್ವನಿ ನೀಡುವುದರ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇದರೊಂದಿಗೆ ಚಲನಚಿತ್ರಕ್ಕೆ ಡಬ್ ಮಾಡಿದ ಪ್ರಥಮ ಕ್ರೀಡಾ ಪಟು ಹಾಗೂ ದೊಡ್ಡ ಫ್ರಾಂಚೈಸಿಗಳಲ್ಲಿ ಒಬ್ಬರಾಗಿರುತ್ತಾರೆ.
ಇದರ ಕುರಿತಂತೆ ಮಾತನಾಡಿರುವ ಗಿಲ್ ನಾನು ಸ್ಪೈಡರ್ ಮ್ಯಾನ್ ನೋಡುತ್ತಾ ಬೆಳೆದಿದ್ದೇನೆ. ಭಾರತೀಯ ಸ್ಪೈಡರ್ ಮ್ಯಾನ್ ಅನ್ನು ಮೊದಲಬಾರಿ ತೆರೆಯ ಮೇಲೆ ಪರಿಚಯಿಸಲಿರುವುದರಿಂದ, ಎರಡು ಭಾಷೆಗೆ ಕಂಠದಾನ ಮಾಡಿರುವುದು ಸಂತಸ ತಂದಿದೆ. ಎಲ್ಲರಂತೆ ಚಿತ್ರವನ್ನು ನೋಡಲು ನಾನು ಸಹ ಕಾತುರನಾಗಿದ್ದೇನೆಂದು ಹೇಳಿಕೊಂಡಿದ್ದಾರೆ.
ಸಿನಿಮಾವು ನೋಡುಗರಿಗೆ ಒಂದು ಕ್ಷಣವಾಗುತ್ತದೆ. ಪ್ರತಿಯೊಬ್ಬರು ಇದರ ಮೇಲೆ ಪ್ರೀತಿಯನ್ನು ತೋರಿಸುತ್ತಾರೆಂಬ ನಂಬಿಕೆ ಇದೆ. ಶುಭ್ಮನ್ ಗಿಲ್ ಕೇವಲ ಯುವ ಐಕಾನ್ ಅಲ್ಲದೆ, ನಮ್ಮ ದೇಶದ ಪರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೆಚ್ಚು ರನ್ ಗಳಿಸಿ ಲಕ್ಷಾಂತರ ಅಭಿಮಾನಿಗಳನ್ನು ರಂಜಿಸಿದ್ದಾರೆಂದು ಸೋನಿ ಪಿಕ್ಚರ್ಸ್ನ ಪ್ರಧಾನ ವ್ಯವಸ್ಥಾಪಕ ಮತ್ತು ಮುಖ್ಯಸ್ಥ ಶೋನೊ ಪಿಂಜರ್ಕನ್ ಮಾಹಿತಿ ಹಂಚಿಕೊಂಡಿದ್ದಾರೆ.
ಮತ್ತೋಂದು ಮೈಲಿಗಲ್ಲು ಸ್ಥಾಪಿಸಿರುವ ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಸಂಸ್ಥೆಯು ಚಿತ್ರವನ್ನು ಇಂಗ್ಲೀಷ್, ಹಿಂದಿ, ತೆಲುಗು, ತಮಿಳು, ಕನ್ನಡ, ಮಲೆಯಾಳಂ, ಗುಜರಾತಿ, ಮರಾಠಿ, ಪಂಜಾಬ್, ಬಂಗಾಳದಲ್ಲಿ ಜೂನ್ 2ರಂದು ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಯೋಜನೆ ರೂಪಿಸಿಕೊಂಡಿದೆ.
Leave a Review