ನವದೆಹಲಿ/ಮುಂಬೈ/ಅಹಮ್ಮದ್: ಬಿಪರ್ ಜಾಯ್ ಅಬ್ಬರ ಜೋರಾಗಿದ್ದು, ಮುಂಬೈ ನ ಜುಹು ಬೀಚ್ ನಲ್ಲಿ ಇಳಿದ 16 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇಬ್ಬರು ನಾಪತ್ತೆಯಾಗಿದ್ದಾರೆ.ಎಚ್ಚರಿಕೆ ನಡುವೆಯೂ ಜುಹು ಬೀಚ್‍ಗೆ ಇಳಿದ ಐವರ ಪೈಕಿ ಓರ್ವ ಬಾಲಕ ಮೃತಪಟ್ಟಿದ್ದು, ಆತನ ಶವ ಪತ್ತೆಯಾಗಿದೆ.
ಇಬ್ಬರು ಬಾಲಕರನ್ನು ರಕ್ಷಿಸಲಾಗಿದ್ದು, ನಾಪತ್ತೆಯಾದ ಇಬ್ಬರಿಗಾಗಿ ಸೇನಾಪಡೆ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಬಿಪರ್ ಜಾಯ್ ಅಬ್ಬರದ ಹಿನ್ನೆಲೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಕೂಡ ಐವರು ಸಮುದ್ರಕ್ಕೆ ಇಳಿದಿದ್ದರು.
ಪ್ರಬಲ ಬಿಪರ್‍ಜಾಯ್ ಚಂಡಮಾರುತ ಗುಜರಾತ್ ಕರಾವಳಿಗೆ ಸಮೀಪಿಸುತ್ತಿದ್ದಂತೆ, ಪಶ್ಚಿಮ ರೈಲ್ವೆಯು ಕರಾವಳಿ ಪ್ರದೇಶಗಳಿಗೆ ತೆರಳುವ 95 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸುತ್ತಿದೆ.
ಗುಜರಾತ್ ತಾಜ್ಯದ ಕರಾವಳಿ ಭಾಗದಲ್ಲಿ ವಿಪತ್ತು ನಿರ್ವಹಣಾ ಕೊಠಡಿಗಳು, ಸಹಾಯ ಕೇಂದ್ರಗಳನ್ನು ಸ್ಥಾಪಿಸಿ, ಪರಿಹಾರ ರೈಲುಗಳನ್ನು ಸಿದ್ಧವಾಗಿರಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಪಶ್ಚಿಮ ರೈಲ್ವೆ ತೆಗೆದುಕೊಳ್ಳುತ್ತಿದೆ ಎಂದು ತಿಳಿಸಲಾಗಿದೆ.
ಭಾವನಗರ ವಿಭಾಗದ ಐದು ಸ್ಥಳಗಳಲ್ಲಿ, ರಾಜ್‍ಕೋಟ್‍ನ ಎಂಟು ಸ್ಥಳದಲ್ಲಿ ಗಳಲ್ಲಿ ಮತ್ತು ಅಹಮದಾಬಾದ್ ವಿಭಾಗದ ಮೂರು ಸ್ಥಳಗಳಲ್ಲಿ ಗಂಟೆಗೆ ಗಾಳಿಯ ವೇಗವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಗಾಳಿಯ ವೇಗ ಗಂಟೆಗೆ 50 ಕಿಮೀ ಮೀರಿದಾಗ ರೈಲುಗಳನ್ನು ನಿಯಂತ್ರಿಸಲು ಅಥವಾ ನಿಲ್ಲಿಸಲು ಸ್ಟೇಷನ್ ಮಾಸ್ಟರ್‍ಗಳಿಗೆ ಸೂಚನೆ ನೀಡಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಬಿಪರ್‍ಜಾಯ್ ಚಂಡಮಾರುತ ಗುರುವಾರ ಮಧ್ಯಾಹ್ನ ಕಚ್ ಜಿಲ್ಲೆಯ ಜಖೌ ಬಂದರಿನ ಸಮೀಪ ಅಪ್ಪಳಿಸುವ ಸಾಧ್ಯತೆ ಇದ್ದು ಭೂಕುಸಿತವನ್ನು ಉಂಟಾಗುವ ಸಾಧ್ಯತೆಯಿದೆ ಮತ್ತು ಗಾಳಿಯ ವೇಗ ಗಂಟೆಗೆ ಗರಿಷ್ಠ 150 ಕಿಲೋಮೀಟರ್‍ಗಳನ್ನುತಲುಪುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಗುಜರಾತ್ ಕರಾವಳಿಯ ಗಾಂಧಾಮ್, ವೆರಾವಲ್, ಓಖಾ, ಪೋರಬಂದರ್‍ಗೆ ಹೋಗುವ 56 ರೈಲುಗಳನ್ನು ಅಹಮದಾಬಾದ್, ರಾಜ್‍ಕೋಟ್ ಮತ್ತು ಸುರೇಂದ್ರನಗರದಲ್ಲಿ ಅಲ್ಪಾವಧಿಗೆ ಇಂದಿನಿಂದ 15 ರ ನಡುವೆ ಸುಮಾರು 95 ರೈಲುಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸಲಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಸುಮಿತ್ ಠಾಕೂರ್ ತಿಳಿಸಿದ್ದಾರೆ.
ಸಮುದ್ರ ಪ್ರಕ್ಷುಬ್ಧಗೊಂಡಿದ್ದು ರಕ್ಕಸಗಾತ್ರದ ಅಲೆಗಳು ಭೀತಿಯನ್ನುಂಟು ಮಾಡ್ತಿವೆ. ಬಿರುಗಾಳಿಸಹಿತ ಮಳೆ ವೈಮಾನಿಕ ಸೇವೆಗಳಿಗೆ ಅಡ್ಡಿಯನ್ನುಂಟು ಮಾಡ್ತಿವೆ. ಮುಂಬೈ ಏರ್ ಪೋರ್ಟ್‍ನಲ್ಲಿ ವಿಮಾನಗಳ ಆಗಮನ-ನಿರ್ಗಮನದಲ್ಲಿ ವ್ಯತ್ಯಯವಾಗಿದೆ.
ಕೆಲ ವಿಮಾನಗಳು ರದ್ದಾದರೆ ಇನ್ನೂ ಕೆಲ ವಿಮಾನಗಳ ಹಾರಾಟ ವಿಳಂಬವಾಗಿದೆ.
ಪ್ರಯಾಣಿಕರು ಪರದಾಡುತ್ತಿದ್ದಾರೆ. ಇದೇ 15ರಂದು ಗುಜರಾತ್‍ನ ಕಛ್ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಬಿಪರ್ಜೋಯ್ ಚಂಡಮಾರುತ ತೀರವನ್ನು ದಾಟಲಿದೆ. ಸದ್ಯ ಪೋರಬಂದರ್ನಿಂದ 310ಕಿಲೋಮೀಟರ್ ದೂರದಲ್ಲಿ, ದ್ವಾರಕದಿಂದ 430 ಕಿಲೋಮೀಟರ್ ಸೈಕ್ಲೋನ್ ಕೇಂದ್ರೀಕೃತ ವಾಗಿದ್ದು, ಗಂಟೆಗೆ 8 ಕಿಲೋಮೀಟರ್ ವೇಗದಲ್ಲಿ ಈಶಾನ್ಯ ದಿಕ್ಕಿನತ್ತ ಚಲಿಸ್ತಿದೆ. ಚಂಡಮಾರುತ ತೀರದಾಟುವ ಸಂದರ್ಭದಲ್ಲಿ ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಂಭವ ಇದೆ.
Leave a Review